ಗಡಿ ವಿವಾದಗಳಿಗೆ ಕುರಿತಂತೆ ಭಾರತ, ಚೀನಾ 20ನೇ ಸುತ್ತಿನ ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

India-and-China

ನವದೆಹಲಿ, ಡಿ.22-ಗಡಿ ವಿವಾದಗಳಿಗೆ ಸಂಬಂಧಪಟ್ಟ ಪ್ರಮುಖ ವಿಷಯಗಳ ಕುರಿತು ಭಾರತ ಮತ್ತು ಚೀನಾ ಇಂದು ವಿಶೇಷ ಪ್ರತಿನಿಧಿಗಳ ಮಟ್ಟದ ಮಹತ್ವದ ಮಾತುಕತೆ ನಡೆಸಿದವು. ಸಭೆಯ ನಿರ್ಣಯಗಳ ಬಗ್ಗೆ ಸಂಜೆಗೆ ಸ್ಪಷ್ಟ ಚಿತ್ರ ಲಭಿಸಲಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ಸಂಧಾನಕಾರ ಯಾಂಗ್ ಜೀಚಿ ಅವರು ಇಂಡೋ-ಚೀನಾ ಗಡಿ ವಿಷಯಗಳ ಕುರಿತು 20ನೇ ಸುತ್ತಿನ ಚರ್ಚೆ ನಡೆಸಿದರು.

ಭಾರತ ಮತ್ತು ಚೀನಾ ನಡುವೆ ತಲೆದೋರಿರುವ ಡೋಕ್ಲಂ ಬಿಕ್ಕಟ್ಟು ಹಾಗೂ ಇತ್ಯರ್ಥವಾಗದೇ ಉಳಿದಿರುವ ಸರಹದ್ದು ವಿವಾದಗಳ ಬಗ್ಗೆ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳು ಗಹನ ಚರ್ಚೆ ನಡೆಸಿದರು. ಸಿಕ್ಕಿಂನಲ್ಲಿರುವ ಡೋಕ್ಲಂ ಗಡಿಯಲ್ಲಿ ಜೂನ್ 16ರಿಂದ ಭಾರತ ಮತ್ತು ಚೀನಾ ನಡುವೆ ರಸ್ತೆ ನಿರ್ಮಾಣ ವಿಷಯದಲ್ಲಿ ವಿವಾದ ತಲೆದೋರಿ ಯುದ್ಧದ ಆತಂಕ ಸೃಷ್ಟಿಯಾಗಿತ್ತು. ಉಭಯ ದೇಶಗಳ ಪರಸ್ಪರ ಹೊಂದಾಣಿಕೆ ಬಳಿಕ ಆಗಸ್ಟ್ 28ರಂದು ಬಿಕ್ಕಟ್ಟು ನಿವಾರಣೆಯಾಯಿತು.

Facebook Comments

Sri Raghav

Admin