ಗಣರಾಜೋತ್ಸವ ಹಿನ್ನೆಲೆಯಲ್ಲಿ 144 ಖೈದಿಗಳಿಗೆ ಬಿಡುಗಡೆ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Released-01

ಬೆಂಗಳೂರು.ಜ.25 : 68ನೇ ಗಣರಾಜೋತ್ಸವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸನ್ನಡತೆ ಆಧಾರದ ಮೇಲೆ ಓರ್ವ ಮಹಿಳಾ ಕೈದಿ ಸೇರಿ 144 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ 61 ಕೈದಿಗಳು ಬಿಡುಗಡೆಯ ಭಾಗ್ಯ ಪಡೆದಿದ್ದಾರೆ. ಮೈಸೂರು ಕಾರಾಗೃಹದಿಂದ 23, ಬೆಳಗಾವಿ ಹಿಂಡಲಗಾ ಜೈಲಿನಿಂದ 17, ವಿಜಯಪುರ ಜೈಲಿನಿಂದ 16, ಬಳ್ಳಾರಿ ಜೈಲಿನಿಂದ 09, ಕಲಬುರಗಿ ಜೈಲಿನಿಂದ 18 ಕೈದಿಗಳು ಬಿಡುಗಡೆಯಾಗುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.

ಕೋಪದ ಕೈಗೆ ಬುದ್ದಿ ಕೊಟ್ಟು ಅಪರಾಧ ಎಸಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದವರ ಮನದಲ್ಲೀಗ ಬಿಡುಗಡೆಯ ಖುಷಿ ಕಾಣಿಸಿಕೊಂಡಿದೆ. ಬಿಡುಗಡೆಯಾದವರು ಮತ್ತೆ ಸಮಾಜಮುಖಿಯಾಗಿ ಬದುಕಲಿ ಅನ್ನೋದು ಎಲ್ಲರ ಹಾರೈಕೆ . ಸಮಾಜದಲ್ಲಿ ಅವರು ಉತ್ತಮ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ರೂಪಾಂತರ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ ಸನ್ನಡತೆ ಹೊಂದಿರುವ ಖೈದಿಗಳ ಬಗ್ಗೆ ನಿಗಾ ವಹಿಸಲಾಗಿದ್ದು ಅದರನ್ವಯ ಪಟ್ಟಿ ಸಿದ್ಧ ಪಡಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin