ಗಣರಾಜ್ಯೋತ್ಸವಕ್ಕೆ ‘ಮುಂಬೈ’

ಈ ಸುದ್ದಿಯನ್ನು ಶೇರ್ ಮಾಡಿ

mumbai

ರಾಮು ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ 36ನೇ ಕಾಣಿಕೆ ಮುಂಬೈ ಚಿತ್ರವು ಗಣರಾಜ್ಯೋತ್ಸವ ದಿನವಾದ ಜ.26ರಂದು ರಾಜ್ಯಾಧ್ಯಂತ  ತೆರೆಕಾಣಲಿದೆ. ಈಗಾಗಲೇ ಚಿತ್ರದ ಆಡಿಯೋ ಬಂಪರ್ ಹಿಟ್ ಆಗಿದ್ದು ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ. ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿರುವ ಚಿತ್ರವನ್ನು ಯಶಸ್ವೀ ಎಕೆ-47 ಚಿತ್ರಕ್ಕೆ ಕಥೆ ಬರೆದ ಎಸ್.ಆರ್. ಬ್ರದರ್ರ್ಸ್ ಈ ಚಿತ್ರಕ್ಕೂ ಕಥೆ ಬರೆದಿದ್ದು, ಎಸ್.ಆರ್. ಬ್ರದರ್ರ್ಸ್‍ರಲ್ಲಿ ಒಬ್ಬರಾದ ರಮೇಶ್‍ರವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿತ್ರಕ್ಕೆ ಎಸ್.ಆರ್. ಬ್ರದರ್ರ್ಸ್ ಕಥೆ, ಚಿತ್ರಕಥೆ, ಮುನು ಕಲ್ಯಾಣಿ ಸಂಭಾಷಣೆ, ರಮೇಶ್ ಚಬ್ಬೆನಾಡ್ ಛಾಯಾಗ್ರಹಣ, ವಿ.ಶ್ರೀಧರ್ ಸಂಭ್ರಮ್ ಸಂಗೀತ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಎಸ್.ಆರ್. ರಮೇಶ್, ಸಂತೋಷ್, ಶ್ರೀಧರ ಸಂಭ್ರಮ್ ಸಾಹಿತ್ಯ, ಮದನ್‍ಹರಿಣಿ ನೃತ್ಯ, ಬಾಬುಖಾನ್ ಕಲೆ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ, ಡಿ.ಶಿವಲಿಂಗ ನಿರ್ದೇಶನ ಸಹಕಾರ, ಹನುಮಂತು ನಿರ್ಮಾಣ ಮೇಲ್ವಿಚಾರಣೆಯಿದ್ದು, ಚಿತ್ರವನ್ನು ಎಸ್.ಆರ್. ರಮೇಶ್ ನಿರ್ದೇಶಿಸುತ್ತಿದ್ದಾರೆ. ತಾರಾಗಣದಲ್ಲಿ ಡಾರ್ಲಿಂಗ್ ಕೃಷ್ಣ, ತೇಜು, ಆಶಿಷ್ ವಿದ್ಯಾರ್ಥಿ, ಚಸ್ವಾ, ರಂಗಾಯಣರಘು, ಬುಲೆಟ್ ಪ್ರಕಾಶ್, ಕೋಟೆ
ಪ್ರಭಾಕರ್, ಕಡ್ಡಿಪುಡಿ ಚಂದ್ರು ಮುಂತಾದವರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin