ಗಣರಾಜ್ಯೋತ್ಸವ ಟಾರ್ಗೆಟ್ : ಗಡಿಯಲ್ಲಿ ಒಳನುಸುಳುತ್ತಿರುವ ಉಗ್ರರು, ಎಲ್ಇಟಿ ಉಗ್ರನ ಎನ್‍ಕೌಂಟರ್

ಈ ಸುದ್ದಿಯನ್ನು ಶೇರ್ ಮಾಡಿ

LeT-Abu

ಶ್ರೀನಗರ, ಜ.19– ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಮಿತಿಮೀರುತ್ತಿದೆ. ಇದೇ 26ರಂದು ಗಣರಾಜ್ಯೋತ್ಸವ ಸಮಾರಂಭ ನಡೆಯುವ ಹಿನ್ನೆಲೆಯಲ್ಲಿ ದೇಶದ ಮಹಾನಗರಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟ ನಡೆಸಿ ಅಪಾರ ಪ್ರಮಾಣದ ಅನಾಹುತ ಉಂಟುಮಾಡಲು ಉಗ್ರರು ಗಡಿಯಲ್ಲಿ ನುಸುಳುತ್ತಿರುವುದು ಹೆಚ್ಚಾಗಿದೆ.
ಇಂದು ಬೆಳಗ್ಗೆ ಲಷ್ಕರ್ ತೊಯ್ಬಾ ಉಗ್ರಗಾಮಿ ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.

ದಾಳಿ ವೇಳೆ ಗಣರಾಜ್ಯೋತ್ಸವ ಟಾರ್ಗೆಟ್ : ಗಡಿಯಲ್ಲಿ ಒಳನುಸುಳುತ್ತಿರುವ ಉಗ್ರರು, ಎಲ್ಇಟಿ ಉಗ್ರನ ಎನ್‍ಕೌಂಟರ್ ಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ಕಾಶ್ಮೀರದ ಬಂಡಿಪುರ ಜಿಲ್ಲೆಯ ಹಜಿವಾ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುವಾಗ  ಭಯೋತ್ಪಾದಕ ಅಡಗಿಕೊಂಡು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ತಕ್ಷಣ ಮಿಂಚಿನ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಎನ್‍ಕೌಂಟರ್ ನಡೆಸಿ ಉಗ್ರಗಾಮಿ ಹತ್ಯೆ ಮಾಡಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.  ಕಳೆದ ವಾರವಷ್ಟೆ ಕುಖ್ಯಾತ ಲಷ್ಕರ್ ಉಗ್ರನನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin