ಗಣಿಗಾರಿಕೆ ಅವ್ಯವಹಾರ : ಕುಮಾರಸ್ವಾಮಿ ಆರೋಪ ತಳ್ಳಿ ಹಾಕಿದ ಸಚಿವ ವಿನಯ್ ಕುಲಕರ್ಣಿ

ಈ ಸುದ್ದಿಯನ್ನು ಶೇರ್ ಮಾಡಿ

Vinay-Kulkarni--02

ಬೆಂಗಳೂರು, ಜ.17- ರಾಜ್ಯದ ಗಣಿಗಾರಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪವನ್ನು ತಳ್ಳಿ ಹಾಕಿದ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ, ಮುಖ್ಯಮಂತ್ರಿ ಅವರ ಕಚೇರಿ ಗಣಿಗಾರಿಕೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ಸೇರಿದಂತೆ ಯಾವುದೇ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿಲ್ಲ.

ಕುಮಾರಸ್ವಾಮಿ ಅವರು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಪ್ಪು ಭಾವನೆಯಿಂದ ಆರೋಪ ಮಾಡುತ್ತಿದ್ದಾರೆ. ಕಚ್ಚಾ ಪುಸ್ತಕದ ದಾಖಲೆ ಆಧಾರದ ಮೇಲೆ ಕುಮಾರಸ್ವಾಮಿಯವರು ಆರೋಪ ಮಾಡಿದ್ದಾರೆ. ಮುಚ್ಚಂಡಿ ಮತ್ತು ವಿಶಾಲ್ ಎಂಟರ್‍ಪ್ರೈಸಸ್ ಸಂಸ್ಥೆಗಳಿಗೆ ಅದಿರು ಉತ್ಪಾದಿಸಲು 2014ರಲ್ಲಿ ಗುತ್ತಿಗೆ ನೀಡಲಾಗಿತ್ತು. ಈ ಎರಡೂ ಕಂಪೆನಿಗಳು ಕಳೆದ ಮಾರ್ಚ್‍ವರೆಗೆ ನಿಗದಿತ ಗುರಿಗಿಂತ ಕಡಿಮೆ ಉತ್ಪಾದನೆ ಮಾಡಿರುವ ಬಗ್ಗೆ, ಉತ್ಪಾದನಾ ಲೋಪದೋಷಗಳ ಬಗ್ಗೆ ತನಿಖೆ ನಡೆಸಿ ವರದಿ ಪಡೆದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಹೀಗಾಗಿ ಅವ್ಯವಹಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಮತ್ತು ಪ್ರಕರಣವನ್ನು ಮುಚ್ಚಿಹಾಕುವ ಪ್ರಮೇಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಿರಿಯ ಅಧಿಕಾರಿಗಳ ತಂಡದ ವರದಿ ಪ್ರಕಾರ ಗುತ್ತಿಗೆ ಪಡೆದ ಸಂಸ್ಥೆಗಳು ನಿಗದಿತ ಗುರಿಗಿಂತ ಕಡಿಮೆ ಅದಿರು ಉತ್ಪಾದಿಸಿರುವ ಬಗ್ಗೆ ದಂಡ ವಿಧಿಸಲಾಗುತ್ತದೆ. ಕಚ್ಚಾ ಪುಸ್ತಕದಲ್ಲಿ 15 ಲಕ್ಷ ಮೆಟ್ರಿಕ್ ಟನ್‍ಗೆ ಬದಲಾಗಿ 20 ಲಕ್ಷ ಟನ್ ಮೆಟ್ರಿಕ್ ಟನ್ ಎಂದು ನಮೂದಿಸಿದ್ದರಿಂದ

Facebook Comments

Sri Raghav

Admin