ಗಣಿದಣಿ ಜನಾರ್ಧನ ರೆಡ್ಡಿ ವಿರುದ್ಧ ಕೊಲೆ ಬೆದರಿಕೆ ದೂರು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy--01ಬಳ್ಳಾರಿ, ಜೂ.3-ಗಣಿದಣಿ ಜನಾರ್ಧನ ರೆಡ್ಡಿ ವಿರುದ್ಧ ಕೊಲೆ ಬೆದರಿಕೆ ದೂರು ದಾಖಲಾಗಿದೆ. 2010ರಲ್ಲಿ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದ ಕಾರ್ಪೊರೇಟರ್ ಪದ್ಮಾವತಿ ಅವರ ಸಹೋದರ ಸುಬ್ಬರಾಯುಡು ಈ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ. ಗಣಿ ರೆಡ್ಡಿ ಪ್ರಭಾವದಿಂದಾಗಿ ಪದ್ಮಾವತಿ ಅವರ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಸಾಕ್ಷಾಧಾರಗಳಿಲ್ಲ ಎಂದು ಸಿಒಡಿ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಈಗ ಈ ಪ್ರಕರಣಕ್ಕೆ ಮರುಜೀವ ಬಂದಿದ್ದು , ರೆಡ್ಡಿ ಸಹೋದರರ ವಿರುದ್ಧ ಸಿಬಿಐ ತನಿಖೆಗೆ ಸುಬ್ಬರಾಯುಡು ಆಗ್ರಹಿಸಿದ್ದಾರೆ.ಜೀವ ಬೆದರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಎದುರು ಮಾತನಾಡಿದ ಸುಬ್ಬರಾಯುಡು ಈ ಬೆದರಿಕೆಗೆ ಕಾರಣ ಮತ್ತಿತರ ವಿಷಯಗಳ ಬಗ್ಗೆ ವಿವರ ಮಾಹಿತಿಯನ್ನು ಸದ್ಯಕ್ಕೆ ನೀಡಲು ಸಾಧ್ಯವಿಲ್ಲ. ತನಿಖೆ ವೇಳೆ ಪೊಲೀಸರ ಎದುರು ಎಲ್ಲ ವಿವರ ನೀಡುವೆ ಎಂದು ತಿಳಿಸಿದ್ದಾರೆ. ಅಂತೂ ಕಾರ್ಪೊರೇಟರ್ ಪದ್ಮಾವತಿ ಕೊಲೆ ಪ್ರಕರಣ ಮತ್ತೆ ಗಣಿ ರೆಡ್ಡಿಗೆ ಕಂಟಕವಾಗುವ ಸಾಧ್ಯತೆಗಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin