ಗಣೇಶ ವಿಸರ್ಜನೆಯ ಅವಘಡ ತಪ್ಪಿಸಲು ಕಲ್ಯಾಣಿ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

channapatanna-7

ಚನ್ನಪಟ್ಟಣ, ಆ.19- ಗೌರಿ ಗಣೇಶ ಹಬ್ಬದ ನಂತರ ಗಣೇಶ ವಿಸರ್ಜನೆಯ ವೇಳೆ ಸಂಭವಿಸುವ ಅವಘಡಗಳುನ್ನು ತಡೆಗಟ್ಟಲು ಚನ್ನಪಟ್ಟಣ ಪ್ರಾಧಿಕಾರದ ಅಧ್ಯಕ್ಷ ಶಾರದಾಗೌಡ ತಾಲ್ಲೂಕಿನ ರಂಗರಾಯನದೊಡ್ಡಿಯಲ್ಲಿ ಹೊಸ ಕಲ್ಯಾಣಿ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದರು.  ನಂತರ ಮಾತನಾಡಿದ ಅವರು, ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ. ಗಣೇಶ ವಿಸರ್ಜಿಸಲು ಪ್ರತ್ಯೇಕ ಸ್ಥಳವಿಲ್ಲದೆ ಜನಸಾಮಾನ್ಯರು ಪರದಾಡುವ ಸಂದರ್ಭ ಎದುರಾಗಿತ್ತು.ಕೆರೆಗಳಲ್ಲಿ, ಬಾವಿಗಳಲ್ಲಿ ವಿಸರ್ಜಿಸುವುದರಿಂದ ನೀರು ವಿಷವಾಗುವ ಕಾರಣದಿಂದ ಅದನ್ನು ತಪ್ಪಿಸಲು ಹಾಗೂ ವಿಸರ್ಜಿಸುವ ಸಂದರ್ಭದಲ್ಲಿ ಮಕ್ಕಳು, ಯುವಕರು ನೀರಿನಲ್ಲಿ ಮುಳುಗಿ ಹಲವರ ಪ್ರಾಣಹಾನಿ ನಡೆಯದಂತೆ ಮುನ್ನೆಚ್ಚರಿಕೆಯಿಂದ ಕಲ್ಯಾಣಿ ನಿರ್ಮಿಸಲು ಮುಂದಾಗಿದ್ದೇವೆ.

ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.ಸುಮಾರು 50×50 ಆಡಿ ಆಳದ ಸುಮಾರು 19 ಲಕ್ಷ ರೂ.ಗಳ ಯೋಜನೆಯನ್ನು ಹಮ್ಮಿಕೊಂಡಿದ್ದು, ಒಂದು ವರ್ಷದ ಹಿಂದೆಯೇ ಯೋಜನೆ ರೂಪುಗೊಂಡಿದ್ದು, ಪ್ರಾಧಿಕಾರದ ಸಮ್ಮತಿ ದೊರೆತ ನಂತರ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ತಿಂಗಳು ಸೆ.4ರ ಗಣೇಶ ವಿಸರ್ಜನೆಯ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.ರಾಮನಗರ ನಗರಸಭೆಯ ಅಧ್ಯಕ್ಷ ನವೀತ್‍ಬಾಬು, ಉಪಾಧ್ಯಕ್ಷ ಮುತ್ತುರಾಜ್, ರಾ-ಚ ಪ್ರಾಧಿಕಾರದ ಸದಸ್ಯರಾದ ಬಾಬು, ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin