ಗಣೇಶ ವಿಸರ್ಜನೆ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

dabas-pete

ದಾಬಸ್‍ಪೇಟೆ, ಸೆ.15- ಗಣೇಶ ವಿಸರ್ಜನೆ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಕ್ಕೇಪಾಳ್ಯ ಕೆರೆಯಲ್ಲಿ ನಡೆದಿದೆ.ಆಲೂರಿನಿ ನಿವಾಸಿ ತಮಟೆ ಬಾರಿಸುವ ಹನುಮಂತರಾಯಪ್ಪ(30) ಮೃತ ದುರ್ದೈವಿ.ನೆಲಮಂಗಲ ವಿದಾನಕ್ಷೇತ್ರದ ಕಂಬಾಳು ಹತ್ತಿರವಿರುವ ಕಕ್ಕೇಪಾಳ್ಯ ಕೆರೆಯಲ್ಲಿ ನಿನ್ನೆ ರಾತ್ರಿ 12.30ರಲ್ಲಿ ಗಣೇಶವಿಸರ್ಜನೆ ಮಾಡುವ ಸಮಯದಲ್ಲಿ ತಮಟೆ ಬಾರಿಸುವ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆರೆಯ ಕಂದಕದೊಳಕ್ಕೆ ಬಿದ್ದು ಹನುಮಂತರಾಯಪ್ಪ ಮೃತಪಟ್ಟಿದ್ದಾರೆ.

ತಮಟೆ ಬಾರಿಸಿಕೊಂಡು ಜತೆಗೆ ವ್ಯವಸಾಗಯ ಮಾಡುತ್ತಿದ್ದ ಹನುಮಂತರಾಯಪ್ಪರಿಗೆ ಪತ್ನಿ, ಒಬ್ಬ ಮಗ ಹಾಗೂ ಒಬ್ಬ ಮಗಳಿದ್ದಾಳೆ.  ಕಕ್ಕೇಪಾಳ್ಯ ಕೆರೆಯಲ್ಲಿ ಅಲ್ಲಲ್ಲಿ ಮರಳು ತೆಗೆಯಲು 25 ಅಡಿ ಗುಂಡಿಗಳನ್ನು ತೋಡಿ ಹಾಗೆಯೇ ಬಿಟ್ಟಿದ್ದೇ ಈ ಘಟನೆ ಸಂಭವಿಸಲು ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.ಸುದ್ದಿ ತಿಳಿದು ಕುದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin