ಗಣೇಶ ಹಬ್ಬ ಆಚರಿಸಲು ನೆಂಟರ ಮನೆಗೆ ಹೋಗಿದ್ದಾಗ ಮನೆಯಲ್ಲಿ ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

robbery

ನೆಲಮಂಗಲ, ಸೆ.6- ನೆಂಟರ ಮನೆಗೆ ಗಣೇಶ ಹಬ್ಬ ಆಚರಣೆಗೆ ಹೋಗಿದ್ದಾಗ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಹೊರವಲಯದ ವಾಜರಹಳ್ಳಿಯಲ್ಲಿ ನಡೆದಿದೆ.ಸೀತಾ ಎಂಬುವರ ಮನೆಯಲ್ಲಿಯೇ ಈ ಕಳ್ಳತನ ನಡೆದಿದ್ದು, ನಿನ್ನೆ ಬೆಳಗ್ಗೆಯೇ ಅವರು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಹೋಗಿದ್ದರು.ತಡರಾತ್ರಿ ವಾಪಸ್ ಬಂದಾಗ ಮನೆ ಬಾಗಿಲು ಒಡೆದಿರುವುದು ಗೊತ್ತಾಗಿ ಆತಂಕಗೊಂಡು ತಕ್ಷಣ ಒಳ ಹೋಗಿ ನೋಡಿದಾಗ ಸುಮಾರು 200 ಗ್ರಾಂ ಚಿನ್ನಾಭರಣ, 2.5 ಕೆ.ಜಿ. ಬೆಳ್ಳಿ ಸಾಮಗ್ರಿಗಳು ಕಳುವಾಗಿರುವುದು ಗೊತ್ತಾಗಿದೆ. ನಂತರ ಅವರು ನೆಲಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin