ಗದಗದಲ್ಲಿ ಇಂದು ಡ್ರಾಮಾ ಜ್ಯೂನಿಯರ್ಸ್ ಗ್ರ್ಯಾಂಡ್ ಫಿನಾಲೆ

ಈ ಸುದ್ದಿಯನ್ನು ಶೇರ್ ಮಾಡಿ

Drama

ದಗ, ಸೆ.25- ಕರ್ನಾಟಕದ ಪ್ರತಿ ಮನೆ-ಮನಗಳಲ್ಲಿ ಮನೆ ಮಾತಾಗಿರುವ ಡ್ರಾಮಾ ಜ್ಯೂನಿಯರ್ಸ್ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಇಂದು ಸಂಜೆ ನಡೆಯಲಿರುವ ಗ್ರ್ಯಾಂಡ್ ಫಿನಾಲೆಗಾಗಿ ಮುದ್ರಣ ಕಾಶಿ ಕಲಾಭಿಮಾನಿಗಳು ಕಾದು ಕುಳಿತಿದ್ದಾರೆ. ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಭವ್ಯವಾದ ವೇದಿಕೆ ನಿರ್ಮಿಸಲಾಗಿದೆ. ನಾ ಮುಂದು ತಾ ಮುಂದು ಎಂದು ಮಕ್ಕಳು ಹರುಷದಿಂದ ಪಾಲ್ಗೊಳ್ಳುತ್ತಿರುವುದು ಕಂಡುಬಂದಿತು. ಇಡೀ ನಗರದಲ್ಲಿ ಸಂಭ್ರಮದ ವಾತಾವರಣ ಉಂಟಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಡ್ರಾಮಾ ಜ್ಯೂನಿಯರ್ಸ್ ಗ್ರ್ಯಾಂಡ್ ಫಿನಾಲೆ ನಮ್ಮ ಊರಿನಲ್ಲಿ ನಡೆಯುತ್ತಿರುವುದು ತುಂಬ ಖುಷಿ ತಂದಿದೆ ಎಂದು ಗದಗದ ಸ್ಪರ್ಧಾಳು ಪುಟ್ಟರಾಜ ತಿಳಿಸಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin