ಗದಗದಿಂದ ಎಚ್.ಕೆ.ಪಾಟೀಲ್ ಸೋಲಿಸುವಂತಹ ಅಭ್ಯರ್ಥಿ ಕಣಕ್ಕೆ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

BSY
ಗದಗ, ಮೇ 26- ಮುಂದಿನ ಚುನಾವಣೆ ಯಲ್ಲಿ ಎಚ್.ಕೆ. ಪಾಟೀಲ್ ಅವರನ್ನು ಸೋಲಿಸು ವಂತಹ ಅಭ್ಯರ್ಥಿಯನ್ನೇ ಇಲ್ಲಿ ಕಣಕ್ಕಿಳಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಪ್ರತಿಜ್ಞೆ ಮಾಡಿದ್ದಾರೆ.  ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ವಿದ್ದರೂ ಇದರ ಬಗ್ಗೆ ಕ್ರಮ ಕೈಗೊಳ್ಳದ ಸಚಿವರ ನಿಲುವು ಖಂಡಿಸಿ ಕೆಲ ಸಂಘಟನೆಗಳು ಇಂದು ನಗರದಲ್ಲಿ ನಡೆಸಿದ ಬೃಹತ್ ಪ್ರತಿಭಟನೆಗೆ ಯಡಿಯೂರಪ್ಪ ಸೇರಿ ದಂತೆ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದರು.ಸರ್ಕಾರದಲ್ಲಿ ಪ್ರಭಾವಿ ಸಚಿವರೆನಿಸಿಕೊಂಡವರೇ ತಮ್ಮ ಕ್ಷೇತ್ರದ ಜನತೆಗೆ ನೀರು ಕೊಡದಿದ್ದರೆ ಅವರು ಯಾವ ರೀತಿ ಯಲ್ಲಿ ಜನಕಲ್ಯಾಣ ಯೋಜನೆ ಮಾಡುತ್ತಿದ್ದಾ ರೆಂಬುದು ತಿಳಿದು ಬರುತ್ತದೆ. ಅವರನ್ನು ಮುಂದಿನ ಚುನಾವಣೆ ಯಲ್ಲಿ ಸೋಲಿಸುವುದೇ ನಮ್ಮ ಮುಂದಿನ ಗುರಿ ಎಂದು ಗುಡುಗಿದರು.
ಜನಾರ್ದನರೆಡ್ಡಿ ಯವರನ್ನು ಈ ಭಾಗ ದಿಂದ ಕಣಕ್ಕಿಳಿಸುವ ಬಗ್ಗೆ ಈಗಲೇ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧರಿಸು ತ್ತದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin