ಗದಗ ಜಿಲ್ಲೆಯಾದ್ಯಂತ ಭಾರೀ ಮಳೆ , ಹಳ್ಳಕ್ಕೆ ಉರುಳಿದ ಬಸ್, ಪ್ರಯಾಣಿಕರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Bus-Rain--01

ಗದಗ,ಮೇ 15-ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಭಾರೀ ಗಾಳಿ, ಗುಡುಗು ಸಹಿತ ಸತತವಾಗಿ ಸುರಿದ ಮಳೆಗೆ ವಿದ್ಯುತ್ ಕಂಬಗಳು ಉರುಳಿಬಿದ್ದು, ಮನೆಗಳು ಜಲಾವೃತಗೊಂಡಿದೆ. ಲಕ್ಷ್ಮೀಶ್ವರದಲ್ಲಿ ಸಾರಿಗೆ ಬಸ್ಸೊಂದು ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ವರುಣನ ಆರ್ಭಟಕ್ಕೆ ಕೆಎಸ್‍ಆರ್‍ಟಿಸಿ ಬಸ್ ಹಳ್ಳಕ್ಕೆ ಉರುಳಿಬಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಶಿರಟ್ಟಿ ತಾಲ್ಲೂಕಿನ ಲಕ್ಷ್ಮೀಶ್ವರದಿಂದ ದೊಡ್ಡೂರಿಗೆ ಹೊರಟ್ಟಿದ್ದ ಸಾರಿಗೆ ಬಸ್ ದೊಡ್ಡೂರು ಹಳ್ಳದ ಸಮೀಪ ಸೇತುವೆಯಲ್ಲಿ ಕೊಚ್ಚಿ ಹೋಗಿದೆ.ತುಂಬು ಹರಿಯುತ್ತಿರುವ ದೊಡ್ಡೂರ ಹಳ್ಳದಲ್ಲಿ ಚಾಲಕ ಪ್ರಯಾಣಿಕರ ಮಾತು ಕೇಳದೆ ಬಸ್ ಚಾಲಿಸಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಬಸ್ ಹಳ್ಳಕ್ಕೆ ಉರುಳಿದೆ. ಗಾಬರಿಗೊಂಡ ಪ್ರಯಾಣಿಕರು ನಮ್ಮನ್ನು ಬದುಕಿಸಿ ಎಂದು ಗೋಳಿಟ್ಟಿದ್ದಾರೆ.   ಚೀರಾಟ ಕೇಳಿ ರಕ್ಷಣೆ ಧಾವಿಸಿದ ಸ್ಥಳೀಯರು ಹಗ್ಗದ ಸಹಾಯದಿಂದ ಬಸ್‍ನಲ್ಲಿದ್ದ ಚಾಲಕ ಎಂ.ಬಿ.ತೂಬರಮಟ್ಟಿ, ನಿವಾರ್ಹಕ ಎಸ್.ಎ.ಹೇಳಬಣವಿ, ಪ್ರಯಾಣಿಕರಾದ ರಾಮಪ್ಪ , ಕಿರಣ್, ಹಾಲಪ್ಪ ಅವರನ್ನು ರಕ್ಷಿಸಲಾಗಿದೆ.

ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಒಂದೇ ದಿನ 60 ಮಿ.ಮೀ ಮಳೆಯಾಗಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಎಲ್ಲ ತಾಲ್ಲೂಕಿನಿಂದ ಮಳೆ ಅನಾಹುತದ ವರದಿ ನೀಡುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ.   ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತ ಕ್ರಮ ಕೈಗೊಳ್ಳಬೇಕು,ಯಾವುದೇ ಪರಿಸ್ಥಿತಿ ಎದುರಾದರೆ ಅದನ್ನು ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮನೋಜ್ ಜೈನ್ ಸೂಚಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin