ಗನ್ ತೋರಿಸಿ ಪತಿ, ಮೈದುನನ ಎದುರೇ ಮಹಿಳೆ ಮೇಲೆ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Rape-Gun--02

ಗುರ್‍ಗಾಂವ್, ಜ.23-ಹರ್ಯಾಣದಲ್ಲಿ ಬೆಚ್ಚಿ ಬೀಳುವಂಥ ಅತ್ಯಾಚಾರ ಪ್ರಕರಣಗಳು ಮುಂದುವರಿದಿದೆ. ಕಾರಿನಲ್ಲಿದ್ದವರಿಗೆ ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ ನಾಲ್ವರು ದುರುಳರು, ಪತಿ ಮತ್ತು ಮೈದುನನ ಎದುರೇ 22 ವರ್ಷ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಹೀನ ಘಟನೆ ರ್‍ಗಾಂವ್(ಗುರುಗ್ರಾಮ)ನಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಬಂಧಿಸಲಾಗಿದೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಮಹಿಳೆ, ಆಕೆಯ ಪತಿ ಮತ್ತು ಮೈದುನ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಗುರ್‍ಗಾಂವ್‍ನ ಸೆಕ್ಟರ್-56ರ ಬ್ಯುಸಿನೆಸ್ ಪಾರ್ಕ್ ಟವರ್ ಬಳಿ ಮಾರ್ಗಮಧ್ಯೆ ಪತಿ ಮೂತ್ರ ವಿಸರ್ಜನೆಗಾಗಿ ವಾಹನವನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿದರು.

ಆಗ ಎರಡು ಕಾರುಗಳಲ್ಲಿ ಅಲ್ಲಿಗೆ ಬಂದ ನಾಲ್ವರು ವಿನಾಕಾರಣ ಜಗಳ ತೆಗೆದು ಮಹಿಳೆಯನ್ನು ಕಾರಿನಿಂದ ಹೊರೆಗೆ ಎಳೆಯಲು ಯತ್ನಿಸಿದರು. ಇದಕ್ಕೆ ಪತಿ ಮತ್ತು ಮೈದುನ ಪ್ರತಿರೋಧ ವ್ಯಕ್ತಪಡಿಸಿದಾಗ ಗನ್ ತೋರಿಸಿದ ನಾಲ್ವರು ದುಷ್ಕರ್ಮಿಗಳು ಪ್ರಾಣ ಬೆದರಿಕೆ ಹಾಕಿದರು. ನಾಲ್ವರಲ್ಲಿ ಒಬ್ಬ ದುಷ್ಕರ್ಮಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ. ನಂತರ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಕತ್ತಲಲ್ಲಿ ಪರಾರಿಯಾದರು.

ಒಂದು ಕಾರಿನ ನೋಂದಣಿ ಸಂಖ್ಯೆಯನ್ನು ಗುರುತು ಮಾಡಿಕೊಂಡಿದ್ದ ಪತಿ ಪೊಲೀಸರಿಗೆ ದೂರು ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಗುರ್‍ಗಾಂವ್‍ನ ಸೋನಾ ಬಳಿ ನಾಲ್ವರನ್ನು ಬಂಧಿಸಿದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮನೀಷ್ ಸೆಹಗಲ್ ತಿಳಿಸಿದ್ದಾರೆ.   ಕಳೆದ ಒಂದು ತಿಂಗಳಿನಿಂದ ಹರಿಯಾಣದಲ್ಲಿ ಅತ್ಯಾಚಾರ ಮತ್ತು ಗ್ಯಾಂಗ್‍ರೇಪ್ ಪ್ರಕರಣಗಳು ಹೆಚ್ಚಾಗಿದ್ದು, ಮಹಿಳೆಯರು ಭಯಭೀತರಾಗಿದ್ದಾರೆ.
.

Facebook Comments

Sri Raghav

Admin