ಗನ್ ತೋರಿಸಿ 25 ಲಕ್ಷ ರೂ. ದರೋಡೆ ಮಾಡಿದ್ದ ಎಎಪಿ ಯುವ ಮುಖಂಡನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

AAP--Leader

ನವದೆಹಲಿ, ಮಾ.20-ಉದ್ಯಮಿಯೊಬ್ಬರಿಗೆ ಗನ್ ತೋರಿಸಿ ಕೊಲ್ಲುವ ಬೆದರಿಕೆಯೊಡ್ಡಿ 25 ಲಕ್ಷ ರೂ.ನಗದು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ(ಎಎಪಿ) ಯುವ ಕಾರ್ಯಕರ್ತನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.  ಜ ಫ್ರಾಬಾದ್‍ನ ಎಎಪಿ ಯುವ ಘಟಕದ ಅಧ್ಯಕ್ಷ ನಜೀಬ್(25) ಬಂಧಿತ ಆರೋಪಿ. ಆದರೆ, ಆತನಿಗೂ ತಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ. ಇದೇ ಪ್ರಕರಣದ ಸಂಬಂಧ ಇನ್ನೂ ಐವರನ್ನು ಬಂಧಿಸಲಾಗಿದೆ.

ನಜೀಬ್ ಮತ್ತು ಆತನ ಸಹಚರರು ಮಾ.12ರಂದು ಮೌಜ್‍ಪುರ್‍ನ ಕೃಷ್ಣ ಗಲಿಯಲ್ಲಿ ತಮಗೆ ಗನ್ ತೋರಿಸಿ 25 ಲಕ್ಷ ರೂ.ಗಳು ಹಾಗೂ ದಾಖಲೆ ಪತ್ರಗಳಿಂದ ಬ್ಯಾಗ್ ಮತ್ತು ಮೊಬೈಲ್ ಫೋನ್‍ನನ್ನು ದರೋಡೆ ಮಾಡಿದ್ದರು ಎಂದು ಉದ್ಯಮಿ ವಿಪುಲ್ ಜೈನ್ ಆರೋಪಿಸಿದ್ದರು.   ಉದ್ಯಮಿಯನ್ನು ಕೊಲ್ಲುವುದಾಗಿ ಬೆದರಿಸಲು ದರೋಡೆಕೋರರು ಗಾಳಿಯಲ್ಲಿ ಗುಂಡು ಹಾರಿಸಿದಾಗ ಅದು ಆಕಸ್ಮಿಕವಾಗಿ ವ್ಯಕ್ತಿಯೊಬ್ಬನಿಗೆ ತಗುಲಿ ಗಾಯಗೊಂಡಿದ್ದರು. ಬಂಧಿತ ದರೋಡೆಕೋರರ ಗ್ಯಾಂಗ್‍ನಿಂದ 16,06,600 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin