ಗರಗಸಕ್ಕೆ ಸಿಕ್ಕಿ ತುಂಡು ತುಂಡಾದ ದೈವ ಸ್ವರೂಪಿ ನಾಗರಹಾವು (ವಿಡಿಯೋ)

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಜು. 29 : ಬೆಂಗಳೂರಿನ ನಗರದ ಯಶ್ವಂತಪುರ ಸಮೀಪದ ಜೆ.ಪಿ. ಪಾರ್ಕ್ ಮುತ್ಯಾಲಮ್ಮ ದೇವಾಲಯದಲ್ಲಿ ವಾರ್ಷಿಕೋತ್ಸವಕ್ಕಾಗಿ ಆಲದಮರ ಕತ್ತರಿಸುವ ವೇಳೆ ಮರದಲ್ಲಿದ್ದ ಹಳೆಯ ದೈವ ಸ್ವರೂಪಿ ಹಾವು ಸಾವನ್ನಪ್ಪಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಮರದ ರೆಂಬೆ ಕತ್ತರಿಸುವ ವೇಳೆ ಮರದ ಪೊಟರೆಯೊಳಗಿದ್ದ ನಾಗರಹಾವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮೂರು ಪೀಸ್‌‌‌ಗಳಾಗಿ ಬಿದ್ದಿದ್ದು, ಒದ್ದಾಡಿ ಸಾವನ್ನಪ್ಪಿದೆ.   ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಧರ್ಮದರ್ಶಿ ಹಾಗೂ ಜೆ.ಪಿ. ಪಾರ್ಕ್ ಕಾರ್ಪೋರೇಟರ್ ಮಮತಾ ಪತಿ ವಾಸುದೇವ್ ಮೇಲೆ ಆರೋಪ ಕೇಳಿ ಬಂದಿದೆ. ಕಾರ್ಪೋರೇಟರ್ ಮಮತಾ ಪತಿ ವಾಸುದೇವ ಸರ್ಕಾರಿ ಜಾಗ ಕಬಳಿಸುವ ಉದ್ದೇಶದಿಂದ ಮರ ಕತ್ತರಿಸಲು ಮುಂದಾಗಿದ್ದಾರೆ.

ಅವರಿಗೆ ಶಿವಣ್ಣ ಎಂಬ ಸ್ಥಳೀಯ ಸಾಥ್ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೂನ್ 29ರಂದು ಪ್ರಕರಣ ನಡೆದಿದ್ದು, ಘಟನೆಯಲ್ಲಿ ಹಾವು ಸಾವನ್ನಪ್ಪಿದ್ದನ್ನು  ಸ್ಥಳದಲ್ಲಿದ್ದೋರು ಮೊಬೈಲ್‌‌ನಲ್ಲಿ ಸೆರೆ ಹಿಡಿದಿದ್ದಾರೆ.

ಮುತ್ಯಾಲಮ್ಮ ದೇವಾಲಯ ಪುರಾತನವಾದ ದೇವಸ್ಥಾನವಾಗಿದ್ದು, ದೇವಾಲಯದಲ್ಲೆ ವಾಸವಾಗಿದ್ದ ಹಾವು ಸಾವನ್ನಪ್ಪಿದ್ದಕ್ಕೆ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳಾದ ಶಿವರಾಮ ಎಂಬುವವರು ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವಾಲಯದ ಧರ್ಮದರ್ಶಿ ವಾಸುದೇವ ವಿರುದ್ಧವು ದೂರು ದಾಖಲಾಗಿದೆ.    ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ವಾಸುದೇವ್, ಇದು ರಾಜಕೀಯ ಪ್ರೇರಿತ ವಿವಾದ. ನಾನು ಅರಣ್ಯ ಇಲಾಖೆಗೆ ಮರದ ರೆಂಬೆ ಕತ್ತರಿಸಲು ಹೇಳಿದ್ದೆ. ನನ್ನ ಗಮನಕ್ಕೆ ಇಲ್ಲ. ನನ್ನ ತಪ್ಪಿಲ್ಲ. ನನ್ನ ಹಾಗೂ ನನ್ನ ಪತ್ನಿಯ ತೆಜೋವಧೆಗೆ ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin