ಗರ್ಭಿಣಿ ಮಹಿಳೆಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ 2 ಜೀವ ಉಳಿಸಿದ ಶಾಸಕ..!

ಈ ಸುದ್ದಿಯನ್ನು ಶೇರ್ ಮಾಡಿ

Beichhua-performing

ಐಜ್ವಾಲ್, ಫೆ.24-ಮತಕ್ಕಾಗಿ ಮನೆ ಬಾಗಿಲಿಗೆ ಅಲೆದು ಗೆದ್ದ ನಂತರ ಜನರತ್ತ ತಿರುಗಿ ನೋಡದ ಶಾಸಕರೇ ನಮ್ಮಲ್ಲಿ ಹೆಚ್ಚಾಗಿದ್ದಾರೆ. ಆದರೆ, ಮಿಜೋರಾಂ ಶಾಸಕರೊಬ್ಬರು ಒಂದು ಆದರ್ಶಪ್ರಾಯ ಕಾರ್ಯದ ಮೂಲಕ ಎರಡು ಅಮೂಲ್ಯ ಜೀಗಳನ್ನು ಉಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ಧಾರೆ.   ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‍ಎಫ್) ಶಾಸಕ ಡಾ.ಕೆ. ಬೀಚ್ಚೌ ಸಿಯಾಹಾದ ಸಿವಿಲ್ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಮತ್ತು ಶಿಶುವಿನ ಪ್ರಾಣ ರಕ್ಷಿಸಿದ್ದಾರೆ.  ಹೆರಿಗೆ ನೋವಿನಿಂದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದಾಗ ಉಸ್ತುವಾರಿ ವೈದ್ಯಾಧಿಕಾರಿ ಗೈರು ಹಾಜರಾಗಿದ್ದರು. ಅಲ್ಲಿ ಬೇರೆ ವೈದ್ಯರು ಮತ್ತು ಸೂಕ್ತ ಸೌಲಭ್ಯಗಳೂ ಸಹ ಇರಲಿಲ್ಲ. ಇದೇ ಸಂದರ್ಭದಲ್ಲಿ ಆ ಸ್ಥಳದಲ್ಲಿದ್ದ ಶಾಸಕರಿಗೆ ಮಾಹಿತಿ ಲಭಿಸಿತು. ವೈದ್ಯಕೀಯ ಅನುಭವವಿದ್ದ ಡಾ. ಬೀಚ್ಚೌ ತಕ್ಷಣ ಕಾರ್ಯೋನ್ಮುಖರಾದರು.

ಆಸ್ಪತ್ರೆಯಲ್ಲಿದ್ದ ಅರೆ ವೈದ್ಯಕೀಯ ಸಿಬ್ಬಂದಿಯ ನೆರವಿನೊಂದಿಗೆ ಮಹಿಳೆಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಸುರಕ್ಷಿತ ಹೆರಿಗೆ ಮಾಡಿಸುವಲ್ಲಿ ಅವರು ಸಫಲರಾದರು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಜನಪ್ರತಿನಿಧಿಯೊಬ್ಬರ ಕರ್ತವ್ಯ ಮತ್ತು ಸಮಯಪ್ರಜ್ಞೆ ಬಗ್ಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin