ಗರ್ಭಿಣಿ ಲುಕ್ ನಲ್ಲಿ ಕಂಗೊಳಿಸಿದ ಕರೀನಾ

ಈ ಸುದ್ದಿಯನ್ನು ಶೇರ್ ಮಾಡಿ

Kareena

ಬಾಲಿವುಡ್ ನಟ ಸೈಫ್ ಅಲಿಖಾನ್ ಮುದ್ದಿನ ಮಡದಿ ಬೇಗಂ ಕರೀನಾ ಕಪೂರ್ಖಾನ್ ಗರ್ಭಿಣಿಯಾಗಿರುವುದು ಗುಟ್ಟಾಗೇನೂ ಉಳಿದಿಲ್ಲ. ಕಳೆದ ತಿಂಗಳೇ ಈ ನಟಿ ತಾನು ಗರ್ಭವತಿ ಎಂಬ ವರದಿಗಳನ್ನು ಖಚಿತಪಡಿಸಿದ್ದಳು. ಈಗ ಬಂದಿರೋ ಹೊಸ ಸುದ್ದಿ ಎಂದರೆ ಬಳಕುವ ಸೊಂಟದ ಸುತ್ತಳತೆ ಹೆಚ್ಚುತ್ತಾ ಕರೀನಾ ಗರ್ಭಿಣಿ ಲುಕ್ನಲ್ಲಿ ಕಂಗೊಳಿಸುತ್ತಿರುವುದು.  ಮುಂಬೈನಲ್ಲಿ ಇತ್ತೀಚೆಗೆ ಶಂಕರ್ ಮಹದೇವನ್ರ ರೆಕಾರ್ಡಿಂಗ್ ಸ್ಟುಡಿಯೋದಿಂದ ನಿರ್ಗಮಿಸುವ ವೇಳೆ ಪ್ರೆಗ್ನೆಂಟ್ ಕರೀನಾ ಕ್ಯಾಮೆರಾ ಕಣ್ಣಿಗೆ ಬಿದ್ದಳು. ಕೆಂಪು ಮತ್ತು ಬಿಳಿ ಗೆರೆಗಳಿರುವ ಮ್ಯಾಕ್ಸಿ ಮತ್ತು ಕೆನೆ ಹಾಲು ಬಣ್ಣದ ಗೌರವರ್ಣ ವದನದ ಮೇಲೆ ಕಪ್ಪು ಕನ್ನಡಕದಲ್ಲಿ ಕರೀನಾ ಮಿಂಚುತ್ತಿದ್ದಳು.

ಆಕೆಯ ಉದರ ಭಾಗ ಸ್ವಲ್ಪ ಉಬ್ಬಿರುವುದು ಬಹು ಬೇಡಿಕೆಯ ತಾರೆ ಗರ್ಭಿಣಿ ಎಂಬುದಕ್ಕೆ ಸಾಕ್ಷಿಯಾಗಿತ್ತು. ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಮಹಿಳೆಯರಲ್ಲಿ ಗೋಚರಿಸುವ ವರ್ಚಸ್ಸು ಆಕೆಯಲ್ಲೂ ಎದ್ದು ಕಾಣುತ್ತಿತ್ತು.  ಆಂಗ್ಲ ಸಿನಿಮಾದಿಂದ ಪ್ರೇರಣೆ ಪಡೆದ ಒಂದು ಫ್ಯಾಮಿಲಿ ಎಂಟರ್ಟೈನರ್ ಮೂವಿ ಹೊರತುಪಡಿಸಿ ಬೇರೆ ಯಾವುದೇ ಹೊಸ ಪ್ರಾಜೆಕ್ಟ್ನನ್ನು ಕರೀನಾ ಇದೇ ಕಾರಣಕ್ಕೆ ಒಪ್ಪಿಕೊಂಡಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin