ಗರ್ಭಿಣಿ ಹೆಂಡತಿಯನ್ನು ಹೆಗಲ ಮೇಲೆ ಹೊತ್ತು 4 ಕಿ. ಮೀ. ನಡೆದ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

Women

ರಾಯಗಢ ಸೆ.21 : ಆಂಬುಲೆನ್ಸ್ ಗೆ ಹಣವಿಲ್ಲದೆ ಹೆಂಡತಿಯ ಮೃತದೇಹ, ಮಗಳ ಮೃತದೇಹ, ಅತ್ತೆಯ ಮೃತದೇಹ ಹೊತ್ತು ನಡೆದುಕೊಂಡು ಹೋದ ಘಟನೆಗಳ ಸಾಲಿಗೆ ಮತ್ತೊಂದು ಹೊಸ ಘಟನೆ ಸೇರ್ಪಡೆಗೊಂಡಿದೆ.  ಆಂಬ್ಯುಲೆನ್ಸ್ ಪಿಕಪ್ ಪಾಯಿಂಟ್ ಜಾಗಕ್ಕೆ ತಲುಪಲು ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಹೆಗಲ ಮೇಲೆ ಹೊತ್ತು ಹಳ್ಳಿಯಿಂದ ಸುಮಾರು 4 ಕಿಲೋ ಮೀಟರ್ ನಷ್ಟು ದೂರ ನಡೆದ ಘಟನೆ ಒಡಿಶಾದಲ್ಲಿ ನಡೆದಿದೆ. ಕನ್ಸಾರಿಕಲ್ ಗ್ರಾಮದ ಬಂಗಾರಿ ಪ್ರಸ್ಕಾ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅದೇ ಗ್ರಾಮದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಆಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ನಿರಂತರವಾಗಿ ಕರೆ ಮಾಡಿದರು ಎರಡು ಗಂಟೆಕಾಲ ತಡವಾಗಿ ಆಯಂಬುಲೆನ್ಸ್ ಬಂದಿದೆ. ಹೀಗಾಗಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಂಗಾರಿಯನ್ನು ಪತಿ ಸಾಂಬರು ಪ್ರಸ್ಕಾ ತನ್ನ ಹೆಗಲ ಮೇಲೆ ಆಕೆಯನ್ನು ಹೊತ್ತು ಒಂದು ಕಿ.ಮೀ ದೂರ ನಡೆದು ಮುಖ್ಯರಸ್ತೆಗೆ ಬಂದಿದ್ದಾನೆ. ನಂತರ ಅಲ್ಲಿಗೆ ಬಂದ ಆಯಂಬುಲೆನ್ಸ್ ಆಕೆಯನ್ನು ಆಸ್ಪತ್ರೆಗೆ ರವಾನಿಸಿದೆ.

ಬಂಗಾರಿಯನ್ನು ಪ್ರರೀಕ್ಷಿಸಿದ ವೈದ್ಯರು ಆಕೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ಸೋಮವಾರ ಘಗುಡಿಮಾಲ ಗ್ರಾಮದ ಬುಡಕಟ್ಟು ಗರ್ಭಿಣಿ ಮಹಿಳೆಯೊಬ್ಬರಿಗೆ ಆಯಂಬುಲೆನ್ಸ್ ಸೇವೆ ಸಿಗದೆ ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದ ದಾರುಣ ಘಟನೆ ವರದಿಯಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin