ಗರ್ಲ್ ಫ್ರೆಂಡ್ ಜೊತೆ ಟ್ರಿಪ್ ಕ್ಯಾನ್ಸಲ್ ಮಾಡಲು ಈತ ಮಾಡಿದ್ದೇನು ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

Choudary

ಹೈದರಾಬಾದ್. ಎ.20 : ಇಲ್ಲೊಬ್ಬ ಮಹಾನುಭಾವ ತನ್ನ ಗರ್ಲ್ ಫ್ರೆಂಡ್ ಜೊತೆ ಟ್ರಿಪ್ ಹೋಗಲು ಹಣ ಕಡಿಮೆಯಾಗಿದ್ದಕ್ಕೆ ವಿಮಾನ ಪ್ರಯಾಣ ರದ್ದುಗೊಳಿಸಲು ಮಾಡಬಾರದ್ದು ಮಾಡಿ ಪೊಲೀಸರ ಅಥಿತಿಯಾಗಿದ್ದಾನೆ.  ಹೌದು, ಈತ ತನ್ನ ಗರ್ಲ್ ಫ್ರೆಂಡ್ ಜೊತೆ ಗೋವಾ ಟ್ರಿಪ್ ಹೋಗಬೇಕಾಗಿತ್ತು, ಹಣದ ಕೊರತೆಯಾಗಿದ್ದರಿಂದ ವಿಮಾನ ಪ್ರಯಾಣವನ್ನು ರದ್ದುಗೊಳಿಸಲು ವಿಮಾನವನ್ನು ಹೈಜಾಕ್ ಮಾಡಲಾಗುವುದು ಎಂದು ಸುಳ್ಳು ಬೆದರಿಕೆ ಮೇಲ್ ಮಾಡಿ ಹೈದರಾಬಾದ್ ಪೊಲೀಸರ ಕೈಗೆ ಇಂದು ಸಿಕ್ಕಿಬಿದ್ದಿದ್ದಾನೆ.ಬಂಧಿತ ವಂಶಿ ಚೌದರಿ ಹುಡುಗಿಯ ಹೆಸರಿನಲ್ಲಿ ಸುಳ್ಳು ಇ- ಮೇಲ್ ಐಡಿ ಕ್ರಿಯೇಟ್ ಮಾಡಿ ಹೈದರಾಬಾದ್, ಚೆನ್ನೈ ಮತ್ತು ಮುಂಬೈನಲ್ಲಿ ವಿಮಾನ ಹೈಜಾಕ್ ಮಾಡಲಾಗುವುದು ಎಂಬ ಹೈಡ್ರಾಮಾ ಮಾಡಿ ಕೆಲಕಾಲ ಆತಂಕ ಸೃಷ್ಟಿಸಿದ್ದ.   ಈತ ತನಗಿರುವ ಹಣದ ಸಮಸ್ಯೆಯನ್ನು ತನ್ನ ಗೆಳತಿಗೆ ನೇರವಾಗಿ ಹೇಳಲಾಗದೆ, ಅವಳ ಮುಂದೆ ಅವಮಾನಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ಏನನ್ನಾದರೂ ಮಾಡಿ ಈ ಟ್ರಿಪ್ ಕ್ಯಾನ್ಸಲ್ ಮಾಡಬೇಕು, ಗೆಳತಿಯ ಎದುರಿಗೆ ಪ್ರಾಮಾಣಿಕನಾಗಿಯೂ ಇರಬೇಕು, ಟ್ರಿಪ್’ನ್ನು ಮುಂದಕ್ಕೆ ಹಾಕಬೇಕು ಎಂದು ಆಲೋಚಿಸಿದಾಗಿ ಅವನಿಗೆ ಹೊಳೆದಿದ್ದೇ ಈ ಕೆಟ್ಟ ಯೋಚನೆ. ಬಂಧಿತ ವಂಶಿ ಚೌದರಿಯನ್ನು ಹೈದರಾಬಾದ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin