ಗಲ್ಲು ಶಿಕ್ಷೆಗೂ ರೇಪಿಸ್ಟ್ ಗಳು ಡೋಂಟ್ ಕೇರ್, ವಿದ್ಯಾರ್ಥಿನಿ ಮೇಲೆ ಗ್ಯಾಂಗ್‍ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

Rape-Girl--01

ಗ್ರೇಟರ್ ನೋಯ್ಡ, ಏ.24-ಅತ್ಯಾಚಾರಿಗಳಿಗೆ ಮರಣ ದಂಡನೆ ಮತ್ತು ಕಠಿಣ ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಅನುಷ್ಠಾನಕ್ಕೆ ಬಂದಿದ್ದರೂ ರೇಪಿಸ್ಟ್ ಗಳಿಗೆ ನಿರ್ಭೀತರಾಗಿ ತಮ್ಮ ಕುಕೃತ್ಯಗಳನ್ನು ಮುಂದುವರಿಸಿರುತ್ತಿರುವ ಘಟನೆಗಳು ದೇಶದ ವಿವಿಧೆಡೆ ವರದಿಯಾಗುತ್ತಲೇ ಇವೆ. ರಾಜಧಾನಿ ದೆಹಲಿ ಸಮೀಪದ ಗ್ರೇಟರ್ ನೋಯ್ಡದಲ್ಲಿ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಆಕೆಯ ಮೇಲೆ ಚಲಿಸುವ ಕಾರಿನಲ್ಲೇ ಅತ್ಯಾಚಾರ ಎಸಗಲಾಗಿದೆ. ಆಕೆಯ ಸಂಬಂಧಿ ಮತ್ತು ಶಾಲಾ ಗೆಳೆಯನಿಂದ ಈ ಕೃತ್ಯ ನಡೆದಿದೆ.

ವಿದ್ಯಾರ್ಥಿಯನ್ನು ಕಾರಿನಲ್ಲಿ ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ನಂತರ ಗಲ್ಗೋಟಿಯಾ ಕಾಲೇಜು ಬಳಿ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದ ಆಕೆ ಪತ್ತೆಯಾಗಿದ್ದಾಳೆ. ಈ ಸಂಬಂಧ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ದುಷ್ಕರ್ಮಿಗಳಿಗಾಗಿ ಶೋಧ ಮುಂದುವರಿಸುತ್ತಿದ್ದಾರೆ.

Facebook Comments

Sri Raghav

Admin