ಗಾಂಧಿನಗರದ 6ನೇ ಅಡ್ಡರಸ್ತೆಗೆ`ವಜ್ರೇಶ್ವರಿ ರಸ್ತೆ’ ಎಂದು ನಾಮಕರಣ

ಈ ಸುದ್ದಿಯನ್ನು ಶೇರ್ ಮಾಡಿ

Vajreshwari--01

ಬೆಂಗಳೂರು, ನ.28-ಗಾಂಧಿನಗರದಲ್ಲಿ ವರನಟ ಡಾ.ರಾಜ್‍ಕುಮಾರ್ ಒಡೆತನದ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಿರುವ 6ನೆ ಅಡ್ಡರಸ್ತೆಗೆ ವಜ್ರೇಶ್ವರಿ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಗಾಂಧಿನಗರದ ಕಾಳಿದಾಸ ಮತ್ತು ಸುಬೇದಾರ್ ಛತ್ರಂ ರಸ್ತೆ ನಡುವಿನ 6ನೆ ಅಡ್ಡರಸ್ತೆಗೆ ವಜ್ರೇಶ್ವರಿ ರಸ್ತೆ ಎಂದು ನಾಮಕರಣ ಮಾಡುವ ನಿರ್ಣಯವನ್ನು ಪಾಲಿಕೆ ಸಭೆಯಲ್ಲಿಂದು ಕೈಗೊಳ್ಳ ಲಾಯಿತು. ಸಂಸದ ಪಿ.ಸಿ.ಮೋಹನ್ ಅವರು 6ನೆ ಅಡ್ಡರಸ್ತೆಗೆ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಸ್ಮರಣಾರ್ಥ ವಜ್ರೇಶ್ವರಿ ರಸ್ತೆ ಎಂದು ನಾಮಕರಣ ಮಾಡುವಂತೆ ಬಿಬಿಎಂಪಿಗೆ ಪತ್ರ ಬರೆದಿದ್ದರು. ಸಂಸದರ ಮನವಿ ಮೇರೆಗೆ ಗಾಂಧಿನಗರದ 6ನೆ ಅಡ್ಡರಸ್ತೆಗೆ ವಜ್ರೇಶ್ವರಿ ರಸ್ತೆ ಎಂದು ನಾಮಕರಣ ಮಾಡುವ ನಿರ್ಣಯವನ್ನು ಪಾಲಿಕೆ ಸಭೆಯಲ್ಲಿ ಕೈಗೊಳ್ಳಲಾಯಿತು.

ನೂರಾರು ಚಲನಚಿತ್ರ ಕಾರ್ಮಿ ಕರ ಕುಟುಂಬಗಳಿಗೆ ಆಸರೆಯಾಗಿದ್ದ ವರನಟ ಡಾ.ರಾಜ್‍ಕುಮಾರ್ ಅವರ ಪತ್ನಿ ದಿ.ಡಾ.ಪಾರ್ವತಮ್ಮ ರಾಜ್‍ಕುಮಾರ್ ಅವರು ಗಾಂಧಿನಗರದಲ್ಲಿ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ತೆರೆದಿದ್ದರು. ತಮ್ಮ ಸಂಸ್ಥೆ ಮೂಲಕ ನೂರಾರು ಕಾರ್ಮಿಕ ಕುಟುಂಬಗಳಿಗೆ ಅನ್ನದಾತೆ ಯಾಗಿದ್ದ ಪಾರ್ವತಮ್ಮ ಅವರು ತಮ್ಮ ಬ್ಯಾನರ್‍ನಡಿ ಹಲವಾರು ಉದಯೋನ್ಮುಖ ನಟ-ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು. ಅವರ ಸ್ಮರಣಾರ್ಥ ವಜ್ರೇಶ್ವರಿ ರಸ್ತೆ ನಾಮಕರಣ ಮಾಡುವ ಮೂಲಕ ಬಿಬಿಎಂಪಿ ಪಾರ್ವತಮ್ಮ ರಾಜ್‍ಕುಮಾರ್ ಅವರಿಗೆ ಗೌರವ ಸಲ್ಲಿಸಿದೆ.

Facebook Comments

Sri Raghav

Admin