ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಬೇಕು : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyur

ಬೆಂಗಳೂರು, ಆ.15-ಮಹಾತ್ಮಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸು ಮಾಡುವತ್ತ ಎಲ್ಲರೂ ಹೆಜ್ಜೆ ಇಡಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ 70ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಖಾದಿಗೆ ಹೆಚ್ಚಿನ  ಮಹತ್ವವನ್ನು ನೀಡುವ ಮೂಲಕ ಗಾಂಧೀಜಿಯವರ ಕನಸನ್ನು ನನಸು ಮಾಡಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಸರಿಯಾದ ಮಾರ್ಗದಲ್ಲಿ ರಾಷ್ಟ್ರವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ವಿದ್ಯುತ್ ಅಭಾವ, ಬಡತನ ನಿರ್ಮೂಲನೆ, ಶೈಕ್ಷಣಿಕ ಪ್ರಗತಿಗೆ ಪ್ರಧಾನಿ ಹೆಚ್ಚು ಒತ್ತು ನೀಡಿದ್ದಾರೆ ಎಂದ ಅವರು, ತಿರಂಗ ಯಾತ್ರೆಗೆ ಎಲ್ಲಾ ರೀತಿಯ ಸಿದ್ಧತೆಯಾಗಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ ಯಾವುದೇ ಸರ್ಕಾರ ಇಂತಹ ತಿರಂಗಯಾತ್ರೆ ಮಾಡಿಲ್ಲ ಎಂದು ಹೇಳಿದರು. ಮಾಜಿ ಸೇನಾನಿ ಶ್ಯಾಮ್‍ರಾವ್ ಸಿಂಧೆ ಮಾತನಾಡಿ, ಸೈನ್ಯದಲ್ಲಿ ಜಾತಿ ಭೇದಭಾವವಿಲ್ಲ, ಆದರೆ ರಾಜಕೀಯದಲ್ಲಿ ಭೇದಭಾವವಿದೆ. ಸೈನಿಕರಿಗೆ ದೇಶ ಮುಖ್ಯ. ಭಾರತ-ಚೀನಾ ಯುದ್ದದಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕ ಹಿನ್ನೆಲೆಯ ಯುವಕರು ಮೃತಪಟ್ಟಿದ್ದಾರೆ ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆ ದೊಡ್ಡದಾಗಿ ಬಿಂಬಿಸುತ್ತಿದೆ. ಆದರೆ ಅದೇ ಕಾಶ್ಮೀರದಲ್ಲಿ ಅದೆಷ್ಟು ಕುಟುಂಬಗಳು ನಾಶವಾಗಿವೆ. ಎಷ್ಟು ಸೈನಿಕರ ಬಲಿದಾನವಾಗಿರುವ ಲೆಕ್ಕವಿದೆಯೇ ಎಂದು ಪ್ರಶ್ನಿಸಿದರು.
ಸಂಸದರಾದ ಸುರೇಶ್ ಅಂಗಡಿ, ಪಿ.ಸಿ.ಮೋಹನ್, ಶಾಸಕರಾದ ಅಶ್ವಥ್‍ನಾರಾಯಣ, ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ಡಿ.ಜೆ.ಪುಟ್ಟಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಜೀಂ ಮತ್ತಿತರರ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin