ಗಾಂಧೀಜಿ ಕುರಿತು ಹೇಳಿಕೆ : ಅಮಿತ್ ಷಾ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramiaha--01

ಹುಬ್ಬಳ್ಳಿ, ಜೂ.11- ಮಹಾತ್ಮಗಾಂಧೀಜಿಯವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೀಡಿರುವ ಹೇಳಿಕೆ ಬಾಲಿಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ನಡೆಸಿದ ಗಾಂಧೀಜಿಯವರ ಬಗ್ಗೆ ಈ ರೀತಿ ಹೇಳಿಕೆ ನೀಡಿರು ವುದು ಸರಿಯಲ್ಲ. ಇಡೀ ದೇಶವೇ ಅವರನ್ನು ಮಹಾತ್ಮ ಎಂದು ಒಪ್ಪಿಕೊಂಡಿದೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಈ ಮಾತಿನಿಂದ ಅವರ ಮನಸ್ಥಿತಿ ಬಯಲಾಗಿದೆ ಎಂದರು.

ಮಹಾತ್ಮ ಗಾಂಧೀಜಿಯವರಿಗೆ ಅಪಮಾನ ಮಾಡುವ ರೀತಿಯಲ್ಲಿ ಅಮಿತ್ ಷಾ ಮಾತನಾಡಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅಮಿತ್ ಷಾಗೆ ಇಲ್ಲ. ಇದು ಖಂಡನಾರ್ಹ ಎಂದು ಹೇಳಿದರು.  ಗೋ ಸಾಕುವವರು ಯಾರು? ಗೋಹತ್ಯೆ ನಿಷೇಧ ಕಾನೂನು ಕುರಿತಂತೆ ಮಾತನಾಡಿದ ಅವರು, ಈ ಕಾನೂನು ಜಾರಿ ಸರಿಯಲ್ಲ. ಗೋ ಹತ್ಯೆ ನಿಷೇಧ ಕಾನೂನು ನಮ್ಮ ರಾಜ್ಯಕ್ಕೆ ಸಂಬಂಧಿಸಿದ ವಿಷಯ. ವಯಸ್ಸಾದ ಗೋವುಗಳ ಹತ್ಯೆಗೆ ನಮ್ಮಲ್ಲಿ ಅವಕಾಶವಿದೆ ಎಂದ ಅವರು, ವಯಸ್ಸಾದ ಅವುಗಳನ್ನು ಸಾಕುವವರು ಯಾರು ಎಂದು ಪ್ರಶ್ನಿಸಿದರು.

ಆಹಾರ ಪದ್ಧತಿ ಅವರವರ ವೈಯಕ್ತಿಕ ಹಕ್ಕು. ಇದು ರಾಜ್ಯದ ನೀತಿ. ಯಾವುದೇ ಆಹಾರ ಪದ್ಧತಿ ಮೇಲೆ ಯಾರೂ ನಿಯಂತ್ರಣ ಹೇರುವಂತಿಲ್ಲ ಎಂದರು.
ಜಿಎಸ್‍ಟಿ ಪರಿಣಾಮ ನೋಡೋಣ: ಈಗಾಗಲೇ ಯಾವ ಯಾವ ಆಹಾರಧಾನ್ಯಗಳ ಮೇಲೆ ಜಿಎಸ್‍ಟಿ ವಿಧಿಸಲಾಗಿದೆ ಎಂಬುದನ್ನು ನೋಡೋಣ. ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳ ಮೇಲೆ ಜಿಎಸ್‍ಟಿ ಪರಿಣಾಮ ಬೀರುತ್ತದೆ ಎಂದರು.   ಜಿಎಸ್‍ಟಿ ನೇತೃತ್ವದ ಕೌನ್ಸಿಲ್ ಸಭೆಗೆ ಕೃಷ್ಣ ಭೈರೇಗೌಡ ಅವರನ್ನು ಕಳುಹಿಸುತ್ತಿರುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಂದ್ ಯಶಸ್ವಿಯಾಗಲ್ಲ:

ಕಳಸಾ-ಬಂಡೂರಿ, ಮಹದಾಯಿ ಯೋಜನೆ ಹಾಗೂ ಬಯಲು ಸೀಮೆಗೆ ಕುಡಿಯುವ ನೀರು ಸೇರಿದಂತೆ ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನಾಳೆ ಕರೆ ನೀಡಿರುವ ಬಂದ್ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದರು.  ವಿಧಾನಪರಿಷತ್ ಸಭಾಪತಿ ಸ್ಥಾನ ಕುರಿತಂತೆ ಕೇಳಿದ ಪ್ರಶ್ನೆಗೆ ಈಗ ಆ ಸ್ಥಾನ ಖಾಲಿಯಾಗಿಲ್ಲ. ಆ ಸ್ಥಾನ ಖಾಲಿಯಾದ ನಂತರ ಆ ಬಗ್ಗೆ ಮಾತನಾಡೋಣ. ಈಗ ಅದು ಅಪ್ರಸ್ತುತ ಎಂದು ಹೇಳಿದರು.

ದಾಖಲೆ ನೀಡಲಿ: ರಾಬರ್ಟ್ ವಾದ್ರಾ ಸಂಸ್ಥೆಯಿಂದ ಭೂ ಕಬಳಿಕೆ ಪ್ರಕರಣ ಕುರಿತಂತೆ ವಾದ್ರಾ ಬಗ್ಗೆ ದಾಖಲೆ ನೀಡಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ, ಸದಾನಂದ ಡಂಗನವರ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin