ಗಾಂಧೀಜಿ ಜೀವಶೈಲಿ ಅಳವಡಿಸಿಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

beluru--gandhiji

ಬೇಲೂರು, ಅ.3- ಪ್ರಸ್ತುತ ಸಮಾಜದಲ್ಲಿ ಗಾಂಧಿಜೀಯವರ ಮಾರ್ಗದರ್ಶನದಲ್ಲಿ ನಡೆಯದ ಕಾರಣ ಆಹಿಂಸೆ, ಅನಾಚಾರ, ಬ್ರಷ್ಟಚಾರಗಳಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ವಿರುದ್ದ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ತಮ್ಮಣ್ಣಗೌಡ(ಅಶ್ವಥ್) ಹೇಳಿದರು.ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿಯವರ 148ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧಿಯವರು ಸಮಾಜದಲ್ಲಿನ ಆನೇಕ ಪಿಡುಗುಗಳನ್ನು ತೊಡೆದು ಹಾಕಲು ಶ್ರಮಿಸಿದ್ದರು. ಇದರಲ್ಲಿ ಪ್ರಮುಖವಾಗಿ ಮದ್ಯಪಾನ ನಿಷೇದಕ್ಕಾಗಿ ಹೊರಾಟವನ್ನು ಮಾಡಿದವರು.

ಮತ್ತು ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಿದ್ದರು. ಅಂತಹ ಮಹಾನ್ ವ್ಯಕ್ತಿಯ ಜೀವನ ಶೈಲಿಯೂ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದು, ಪ್ರತಿಯೊಬ್ಬರು ಗಾಂಧೀ ಜೀಯವರ ಅದರ್ಶ ಮತ್ತು ಜೀವನ ಶೈಲಿಗಳನ್ನು ಅಳವಡಿಕೊಳ್ಳುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡುವುದಕ್ಕೆ ಮುಂದಾಗಬೇಕು ಎಂದು ತಿಳಿಸಿದರು.ತಹಸೀಲ್ದಾರ್ ಪುಟ್ಟಶೆಟ್ಟಿ, ತಾಪಂ ಉಪಾಧ್ಯಕ್ಷೆ ತೀರ್ಥಮ್ಮ, ಸದಸ್ಯರಾದ ಮಂಜುನಾಥ್, ರವಿ, ಪುರಸಭೆ ಅಧ್ಯಕ್ಷೆ ಉಮಾ(ಮುದ್ದಮ್ಮ), ಉಪಾಧ್ಯಕ್ಷ ಅರುಣಕುಮಾರ್, ಮುಖ್ಯಾಧಿಕಾರಿ ಬಸವರಾಜ್, ಉಪ ತಹಸೀಲ್ದಾರ್ ಕೃಷ್ಣಮೂರ್ತಿ, ಸಿಡಿಪಿಒ ಸರಳ ಹಾಗೂ ವಿವಿಧ ಧಾರ್ಮಿಕ ಗುರುಗಳು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin