ಗಾಂಧೀಜಿ ತತ್ವಾದರ್ಶ ಪಾಲಿಸಲು ಕರೆ

ಈ ಸುದ್ದಿಯನ್ನು ಶೇರ್ ಮಾಡಿ

4

ಹುನಗುಂದ,ಅ.3- ಭಾರತದ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಅಹಿಂಸಾ ತತ್ವದಡಿಯಲ್ಲಿ ನಮಗೆ ಸ್ವಾತಂತ್ರ್ಯ ದೊರಕಿಸುವಲ್ಲಿ ಶ್ರಮಿಸಿದ ಮಹಾತ್ಮ ಗಾಂಧೀಜಿ ತತ್ವಾದರ್ಶಗಳನ್ನು ಪಾಲಿಸಬೇಕೆಂದು ನಿವೃತ್ತ ನೌಕರ ಸಂಘದ ಆರ್.ಜಿ. ತೋಟಗೇರ ಹೇಳಿದರು.ನಿನ್ನೆ ಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ರ್ತೀ ಜಯಂತಿ ಅಂಗವಾಗಿ ನಿವೃತ್ತ ನೌಕರರ ಸಂಘ ಹಾಗೂ ಬಾಪೂಜಿ ಗ್ರಾಮೀಣ ಅಭಿವೃದ್ದಿ ಸಂಸ್ಥಯಿಂದ ನಗರದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು-ಬ್ರೆಡ್ ವಿತರಿಸಿ ಅವರು ಮಾತನಾಡುತ್ತ ಗ್ರಾಮೀಣ ಮಟ್ಟದಲ್ಲಿ ಸ್ವದೇಶಿ ವಸ್ತುಗಳನ್ನು ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಮಹತ್ವ ನೀಡಬೇಕೆಂದರು. ಬಿ.ವಿ. ಪಾಟೀಲ, ಮಹಾಂತೇಶ ಅವಾರಿ, ಇಮಾಮ ಕರಡಿ,ಸಿದ್ದಪ್ಪ ಹಾದಿಮನಿ, ಎಸ್.ಎಸ್. ದರಗಾದ, ಎಸ್.ಎಸ್. ಅಂಗಡಿ ಇತರರು ಇದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin