‘ಗಾಢ ಪ್ರೀತಿಯೊಂದಿಗೆ ಸೆಕ್ಸ್ ಮಾಡುವುದು ಅತ್ಯಾಚಾರವಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Sex--02

ಪಣಜಿ, ಏ.2-ಮಹಿಳೆಯೊಬ್ಬಳ ಜೊತೆ ಗಾಢ ಪ್ರೀತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅತ್ಯಾಚಾರವಲ್ಲ, ಅಂಥ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‍ನ ಗೋವಾ ಪೀಠ ಮಹತ್ವದ ತೀರ್ಪು ನೀಡಿದೆ. ಇಬ್ಬರ ನಡುವೆ ಆಳವಾದ ಪ್ರೇಮ ಸಂಬಂಧ ಇದ್ದು, ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧದ ಸಾಕ್ಷಿ ಇದ್ದಾಗ, ಸತ್ಯಾಂಶ ಮರೆಮಾಚಿ ವ್ಯಕ್ತಿಯ ಮೇಲೆ ಆರೋಪ ಹೊರಿಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಹಾಗೂ ಆತನನ್ನು ದೋಷಿ ಎಂದು ಶಿಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸಿ.ವಿ ಭಡಂಗ್ ಹೇಳಿದ್ದಾರೆ.

ತನ್ನನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ವಿಚಾರಣಾ ನ್ಯಾಯಾಲಯ ನೀಡಿದ್ದ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ.ಗಳ ಜುಲ್ಮಾನ ಆದೇಶವನ್ನು ಹೈಕೋರ್ಟ್ ವಜÁಗೊಳಿಸಿದೆ.

Facebook Comments

Sri Raghav

Admin