ಗಾಯಕ ಎನ್.ಎಲ್.ಶಾಸ್ತ್ರಿ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

LN-Shshtri--01

ಹಲವು ತಿಂಗಳಿನಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಗಾಯಕ ಎನ್.ಎಲ್. ಶಾಸ್ತ್ರಿಯವರು ಇಹಲೋಕ ತ್ಯಜಿಸಿದ್ದಾರೆ. ತಮ್ಮ ವಿಶಿಷ್ಟ ಕಂಠದಿಂದಲೇ ಕನ್ನಡಿಗರ ಸಂಗೀತ ಪ್ರಿಯರಲ್ಲಿ ಮನೆ ಮಾಡಿದ್ದ ಎಲ್.ಎನ್.ಶಾಸ್ತ್ರಿ (ಚೈತನ್ಯ) ಅವರು ತಮ್ಮ ಸುಶ್ರಾವ್ಯ ಗೀತೆಗಳಿಂದಲ್ಲದೇ ಸಂಗೀತ ನಿರ್ದೇಶನದಿಂದಲೂ ತಮ್ಮದೇ ವರ್ಚಸ್ಸನ್ನು ರೂಪಿಸಿಕೊಂಡಿದ್ದರು. 1996ರಲ್ಲಿ ತೆರೆಕಂಡ ಕಾಶೀನಾಥ್ ಅಭಿನಯದ ಅಜಗಜಾಂತರ ಚಿತ್ರದಿಂದ ತಮ್ಮ ಸಂಗೀತ ಪಯಣವನ್ನು ಆರಂಭಿಸಿದ ಶಾಸ್ತ್ರೀಯವರು ಇದುವರೆಗೂ 3000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವುದೇ ಅಲ್ಲದೆ 25 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯಿಸಿ ಟಿ.ಎಸ್.ನಾಗಾಭರಣ ನಿರ್ದೇಶಿಸಿದ್ದ ಜನುಮದ ಜೋಡಿ ಚಿತ್ರದ ಕೋಲುಮಂಡೆ ಜಂಗಮ ದೇವ ಗೀತೆಯಿಂದಲೇ ಇಂದಿಗೂ ಪ್ರಸಿದ್ಧಿ ಹೊಂದಿರುವ ಲ.ನಾ.ಶಾಸ್ತ್ರಿಗೆ ಆ ಗೀತೆಗಾಗಿ ರಾಜ್ಯ ಸರ್ಕಾರದಿಂದ ಶ್ರೇಷ್ಠ ಗಾಯಕ ಪ್ರಶಸ್ತಿಗೆ ಭಾಜನರಾದರು.
ನಾದಬ್ರಹ್ಮ ಹಂಸಲೇಖ ಹಾಗೂ ವಿ.ಮನೋಹರ್ ಅವರ ಬಳಿ ಶಿಷ್ಯ ವೃತ್ತಿಯನ್ನೂ ಮಾಡಿದ್ದ ಎಲ್.ಎನ್.ಶಾಸ್ತ್ರಿಯವರು ಕನಸಲ್ಲೂ ನೀನೇ ಮನಸಲ್ಲೂ ನೀನೇ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ವಾತಂತ್ರ್ಯ ಸಂಗೀತ ನಿರ್ದೇಶಕರಾದರು. ರವಿಮಾಮ, ಆ್ಯಂಟಿ ಪ್ರೀತ್ಸೆ, ಹಾಲು ಸಕ್ಕರೆ, ನಿನಗೋಸ್ಕರ, ಬಳ್ಳಾರಿ ನಾಗ, ಡೆಡ್ಲಿ -2, ಫ್ಲಾಪ್, ಮೆಲೋಡಿ ಮುಂತಾದ ಗೀತೆಗಳಿಗೆ ಸಂಗೀತವನ್ನು ನೀಡಿದ್ದಾರೆ. ಎಲ್.ಎನ್.ಶಾಸ್ತ್ರಿಯವರ ನಿಧನಕ್ಕೆ ನಾದ ಬ್ರಹ್ಮ ಹಂಸಲೇಖ, ವಿ.ಮನೋಹರ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವರು ಸಂತಾಪವನ್ನು ಸೂಚಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin