ಲಿಂಗಾಯತ ಪ್ರತ್ಯೇಕ ಧರ್ಮ : ಸರ್ಕಾರದ ನಿರ್ಣಯ ಬೆಂಬಲಿಸಲು ಪಾಪು ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Patil-Puttappa-01

ಧಾರವಾಡ, ಮಾ.25- ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಣಯವನ್ನು ನಾನು ಒಪ್ಪುತ್ತೇನೆ ಲಿಂಗಾಯತರೆನ್ನುವವರು ಇದನ್ನು ಸ್ವಾಗತಿಸಬೇಕು ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೇಳಿದರು.  ನಗರದಲ್ಲಿಂದು ಪತ್ರಿಕಾ ಗೋಷ್ಟಿ ಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿಲುವನ್ನು ಎಲ್ಲರೂ ಒಪ್ಪಲೇಬೇಕು. ಪಂಚ ಪೀಠದ ಶ್ರೀಗಳು ವಿನಾ ಕಾರಣ ಗೊಂದಲ ಸೃಷ್ಟಿ ಮಾಡು ವುದನ್ನು ಬಿಟ್ಟು ಸರ್ಕಾರದ ನಿರ್ಣಯವನ್ನು ಸ್ವಾಗತಿಸುವ ಕೆಲಸ ಮಾಡಲಿ ಎಂದರು. ಬುದ್ಧ-ಬಸವ-ಪೈಗಂಬರ-ಏಸು ಹಾಗೂ ಗುರುನಾನಕರಂತಹ ಮಹಾತ್ಮರುಗಳಿಗೆ ತಂದೆ-ತಾಯಿ ಯಿದ್ದಾರೆ ಹಾಗೂ ಅವರಿಗೆ ಜನ್ಮಸ್ಥಳ ಅನ್ನುವುದಿದ್ದೆ ಆದರೆ ಶ್ರೀ ರೇಣುಕಾ ಚಾರ್ಯರಿಗೆ ಯಾರಿ ದ್ದಾರೆ. ಈ ಕುರಿತಂತೆ ನಾನು ರಂಭಾಪುರಿ ಶ್ರೀಗಳಿಗೆ ಪ್ರಶ್ನಿಸಿದ್ದು ಅವರು ಶ್ರೀ ರೇಣುಕಾಚಾರ್ಯರು ಕಲ್ಲಿನಲ್ಲಿ ಜನಿಸಿದ್ದಾರೆ. ಇದು ಹೇಗೆ ಸಾಧ್ಯ ಎಂದು ಮರು ಪ್ರಶ್ನೆಗೆ ಉತ್ತರವಿಲ್ಲ ಎಂದು ತಿಳಿಸಿದರು.

ಯಾರು ಬಸವತತ್ವಗಳನ್ನು ಒಪ್ಪುತ್ತಾರೆ ಅವರೆಲ್ಲರೂ ಲಿಂಗಾ ಯತರೇ ಎಂದು ಪಾಪು ಕೇಂದ್ರ ಸರ್ಕಾರ ರಾಜ್ಯದ ನಿಲುವಿಗೆ ಸಹ ಮತ ನೀಡಿ ಅಲ್ಪಸಂಖ್ಯಾತನ ಸ್ಥಾನಮಾನ ನೀಡಬೇಕು. ವಿನಾ ಕಾರಣ ಕಾಲಹರಣ ಮಾಡುತ್ತಾ ಮುಂದೂಡುವ ಕೆಲಸ ಮಾಡ ಬಾರದು ಎಂದು ನುಡಿದರು. ಕರ್ನಾಟಕ ರಚನೆಗೊಂಡ ಐತಿಹಾಸಿಕ ಘಟನೆಯ ಬಗ್ಗೆ ಒಂದು ಸ್ಮಾರಕ ನಿರ್ಮಾಣವಾಗಬೇಕು. 22 ವಿಭಿನ್ನ ರಾಜ್ಯಗಳಲ್ಲಿ ಹಂಚಿಹೋಗಿದ್ದ ಕರ್ನಾಟಕವು ಒಂದು ರಾಜ್ಯವಾಗಿ ಕಾಣಿಸಿಕೊಂಡಿದ್ದು ಒಂದು ಐತಿಹಾಸಕ ಘಟನೆಯಾಗಿದೆ. ಈ ಕೊಡಲೇ ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿ, ಈ ಕುರಿತಂತೆ ಈಗಾಗಲೇ ಪತ್ರ ಬರೆದಿರುವುದಾಗಿ ಹೇಳಿದರು.

ಕರ್ನಾಟಕ ರಾಜ್ಯ ನಿರ್ಮಾಣಗೊಂಡ ಕುರಿತು ಭವ್ಯ ಸ್ಮಾರಕವನ್ನು ಜನರು ಸದಾ ಸ್ಮರಿಸಬೇಕು ಎನ್ನುವ ದೃಷ್ಟಿ ಇರಿಸಿಕೊಂಡ ಅದನ್ನು ನಿರ್ಮಾಣ ಮಾಡಲೇಬೇಕು. ಅದಕ್ಕೊಸ್ಕರ 10-20 ಕೋಟಿ ರೂ. ಖರ್ಚಾದರೂ ಚಿಂತೆಯಿಲ್ಲ. ಬೇರೆ ರಾಜ್ಯದವರು ಯಾರೇ ಬಂದರೂ ಅವರಿಗೆ ಕರ್ನಾಟಕ ರಾಜ್ಯವು ಸ್ಥಾಪನೆಗೊಂಡ ಸಂಗತಿಯು ತಿಳಿದಿರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರವು ಯಾವು ಯಾವುದಕ್ಕೋ ಹಣ ಖರ್ಚು ಮಾಡುತ್ತದೆ. ತನ್ನ ಇತಿಹಾಸ ಹೇಳುವ ಈ ಕೆಲಸಕ್ಕೆ ಹಣದ ಪ್ರಶ್ನೆ ಅಡ್ಡಿ ಬರಬಾರದು. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿ ತೊರಿಸಬೇಕು ಎಂದು ಅವರು ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿ ಶಿವಣ್ಣ ಬೆಲ್ಲದ, ಶಂಕರ ಕುಂಬಿ, ಕೃಷ್ಣ ಜೋಶಿ, ಶಿವಾನಂದ ಬಾವಿಕಟ್ಟಿ, ಪ್ರಕಾಶ ಉಡಕೇರಿ ಉಪಸ್ಥಿತರಿದ್ದರು.

Facebook Comments

Sri Raghav

Admin