ಗಾಳಿಪಟ ಹಾರಾಟ ಕ್ರೀಡೆ ಉಳಿಸಿ-ಬೆಳೆಸಿ

ಈ ಸುದ್ದಿಯನ್ನು ಶೇರ್ ಮಾಡಿ

channapatanna

ಚನ್ನಪಟ್ಟಣ, ಆ.16- ಗಾಳಿಪಟ ಹಾರಾಟ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಅತಿ ಮುಖ್ಯ ಎಂದು ಆಕ್ಷ್‍ಪರ್ಡ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಸೌಭಾಗ್ಯ ಅಭಿಪ್ರಾಯಪಟ್ಟರು.ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಜಾತ್ಯಾತಿತ ಪ್ರತಿಷ್ಠಾನ ಟ್ರಸ್ಟ್ ಹಾಗೂ ಕನ್ನಡ  ಸಂಸ್ಕೃತಿ  ಇಲಾಖೆ ಸಹಯೋಗದೊಂದಿಗೆ ಮತ್ತು ಪದ್ಮಭೂಷಣ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮಿಜಿ ಸ್ಮರಣಾರ್ಥವಾಗಿ 70 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗಾಳಿಪಟ ಉತ್ಸವ 2016ರ ಉದ್ಘಾಟಿಸಿ ಅವರು ಮಾತನಾಡಿದರು.
ಗಾಳಿಪಟ, ಗಿಲ್ಲಿದಂಡು, ಗೋಲಿ ಆಟ, ಕಳ್ಳಪೊಲಿಸ್ ಆಟ, ಕಣ್ಣಮುಚ್ಚಾಲೆ ಆಟ ಹಾಗೂ ಇನ್ನೂ ಹಳ್ಳಿಯ ಆನೇಕ ಆಟಗಳನ್ನು ಉಳಿಸಲು ನಾವೆಲ್ಲಾ ಶ್ರಮಿಸಬೇಕಾಗಿದೆ ಎಂದರು.ಗಾಳಿಪಟ ಉತ್ಸವ ನೋಡಲು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನೂರಾರು ಜನರು ಜಮಾಯಿಸಿದ್ದರು.ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು, ಜೆಡಿಎಸ್ ಮುಖಂಡರಾದ ಸುಗ್ಗನಹಳ್ಳಿ ರಾಮಕೃಷ್ಣ, ಶಿವಕುಮಾರ್, ರೈತ ಮುಖಂಡರು ಪ್ರಭುದಾಸ್, ಕರಾಟೆ ಮಾಸ್ಟರ್, ಜಯಕುಮಾರ್, ಮಂಜೇಶ್ ಬಾಬು, ರಾಂಪುರ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin