ಗಿನ್ನಿಸ್ ದಾಖಾಲೆ : ಬರೋಬ್ಬರಿ 4.31 ಕೋಟಿ ರೂ. ಗೆ ಬಿಕಾರಿಯಾದ ಮೋದಿ ಸೂಟ್

ಈ ಸುದ್ದಿಯನ್ನು ಶೇರ್ ಮಾಡಿ

Modi-Suit

ನವದೆಹಲಿ, ಆ.20-ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್ ಈಗ ವಿಶ್ವದಾಖಲೆಯ ಸುದ್ದಿ ಮಾಡಿದೆ.  4.31 ಕೋಟಿ ರೂ.ಗಳಿಗೆ ಅವರ ಸೂಟ್ ಹರಾಜು ಆಗುವ ಮೂಲಕ ಜಗತ್ತಿನ ಅತಿ ದುಬಾರಿ ಹರಾಜಿನ ಸೂಟ್ ಎಂಬ ಗಿನ್ನಿಸ್ ದಾಖಲೆ ಸೃಷ್ಟಿಸಿದೆ. ನರೇಂದ್ರ ದಾಮೋದರ್ದಾಸ್ ಮೋದಿ ಎಂಬ ಶೀರ್ಷಿಕೆ ಹೊಂದಿರುವ ಗೆರೆಗಳುಳ್ಳ ಈ ಕಪ್ಪು ಸೂಟ್ ಅತ್ಯಂತ ದುಬಾರಿ ಬೆಲೆಗೆ ಹರಾಜು ಆದ ಸೂಟ್ ಎಂಬ ಹೆಗ್ಗಳಿಕೆ ಪಡೆದಿದೆ.  ಇದೇ ಸೂಟ್ ಫೆಬ್ರವರಿ 2015ರಂದು ಹರಾಜು ಆಗಿ ಸುದ್ದಿ ಮಾಡಿತ್ತು. ಆದರೆ ಈಗ 4.31 ಕೋಟಿ ರೂ.ಗಳ ದಾಖಲೆ ಮೊತ್ತಕ್ಕೆ ಹರಾಜು ಆಗಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ.  ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಸೂಟ್ ಧರಿಸಿದ್ದರು.

ಅಪರೂಪಕ್ಕೆ ಸೂಟ್ ಧರಿಸುವ ಮೋದಿ ಅವರು ಈ ದಿರಿಸು ಧರಿಸಿದ್ದಾಗ ಪ್ರತಿಪಕ್ಷದವರು ದುಬಾರಿ ಸೂಟ್ ಧರಿಸಿದ್ದಾರೆ ಎಂದು ಟೀಕಿಸಿದ್ದರು. ಆದರೆ, ಅದೇ ಸೂಟ್ ಈಗ ವಿಶ್ವದಲ್ಲೇ ಅತಿ ದುಬಾರಿ ಬೆಲೆಗೆ ಹರಾಜು ಆಗಿರುವುದು ಅಚ್ಚರಿಯ ಸಂಗತಿಯಾಗಿದೆ.  ಗುಜರಾತ್ನ ಸೂರತ್ ನಿವಾಸಿ ವಜ್ರ ವ್ಯಾಪಾರಿ ಲಾಲ್ಜಿಭಾಯ್ ಪಟೇಲ್ ಮೋದಿಯವರ ಈ ಸೂಟನ್ನು ಹರಾಜಿನಲ್ಲಿ ಖರೀದಿ ಮಾಡಿದ್ದು, ಅದು 5 ಕೋಟಿ ರೂ.ಗಳಿಗೂ ಹೆಚ್ಚಾದರೂ ಕೂಡ ನಾನು ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin