ಗಿಫ್ಟ್ ಇ-ಮೇಲೆ ಬಗ್ಗೆ ಎಚ್ಚರ, ಅದರ ಹಿಂದಿರುತ್ತಾರೆ ಇಂತಹ ಖದೀಮರು..!

ಈ ಸುದ್ದಿಯನ್ನು ಶೇರ್ ಮಾಡಿ

Mangaluru

ಮಂಗಳೂರು, ಜೂ.12– ನಿಮಗೆ ಉಡುಗೊರೆ ರೂಪದಲ್ಲಿ ಕೋಟಿ ರೂ. ಹಣ ಬಂದಿದೆ. ಬೇಗ ನಿಮ್ಮ ಹೆಸರು ಬ್ಯಾಂಕ್ ಖಾತೆ ಎಲ್ಲಾ ಕೊಟ್ಟು ಅದನ್ನು ಪಡೆಯಿರಿ ಎಂದು ಮಹಿಳೆಯನ್ನು ನಂಬಿಸಿ 21 ಲಕ್ಷ ರೂ. ಪಡೆದು ನಾಮ ಹಾಕಿ ಪರಾರಿಯಾಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ.  ನವದೆಹಲಿಯ ನಿವಾಸಿ ಲಾಲ್‍ತಾನ್ ಮಾವಿಯಾ (24) ಮತ್ತು ಮಣಿಪುರದ ಕೂಪ್ ಗೋಯಿ ಬಂಧಿತ ಆರೋಪಿಗಳಾಗಿದ್ದಾರೆ.

ವಾಯ್ಲೆಟ್ ಡಿಸೋಜಾ ಎಂಬುವರಿಗೆ ಆರೋಪಿಗಳು ನವದೆಹಲಿಯ ಸ್ಕಾಟ್‍ಲ್ಯಾಂಡ್ ರಾಯಲ್ ಬ್ಯಾಂಕ್ ಹೆಸರಿನಲ್ಲಿ ಇ-ಮೇಲ್‍ವೊಂದನ್ನು ಕಳುಹಿಸಿ ನಿಮಗೆ ಅದೃಷ್ಟ ಒಲಿದಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ನೀಡಬೇಕು ಎಂದು ಮೊದಲು ತಿಳಿಸಿದರು.  ನಂತರ ಇದು ವಿದೇಶಿ ಕರೆನ್ಸಿಯಾಗಿರುವುದರಿಂದ ನೀವು ತೆರಿಗೆ ರೂಪದಲ್ಲಿ 21.58, 200 ರೂ.ಗಳನ್ನು ಜಮೆ ಮಾಡಬೇಕು ಎಂದು ತಿಳಿಸಿದ್ದರು. ಇದನ್ನು ನಂಬಿದ ವಾಯ್ಲೆಟ್ ಡಿಸೋಜಾ ಅವರು ಹಣವನ್ನು ಕೂಡ ಹಾಕಿದ್ದರು. ನಂತರ ಅಂತರ್ಜಾಲದ ಮೂಲಕ ಇದರ ಬಗ್ಗೆ ವಿಚಾರಿಸಿದಾ ಗ ಇಂತಹ ಯಾವುದೇ ಪ್ರಕ್ರಿಯೆ ನಾವು ನಡೆಸಿಲ್ಲ ಎಂದು ನವದೆಹಲಿಯಲ್ಲಿನ ಬ್ಯಾಂಕ್ ತಿಳಿಸಿತ್ತು.

ಇದರಿಂದ ಮೋಸ ಹೋಗಿರುವ ಬಗ್ಗೆ ಅರಿತ ಅವರು ತಕ್ಷಣ ಉಳ್ಳಾಲ ಪೊಲೀಸರಿಗೆ ದೂರು ನೀಡಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಹಿರಿಯ ಅಧಿಕಾರಿಗಳು ಸೈಬರ್ ಅಪರಾಧ ಪತ್ತೆ ದಳದ ನೆರವಿನಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೇನಾಮಿ ಹೆಸರಿನಲ್ಲಿ ಬರುವಂತಹ ಇ-ಮೇಲ್‍ಗಳ ಬಗ್ಗೆ ಎಚ್ಚರವಾಗಿರಿ. ಮೋಸ ಹೋಗಬೇಡಿ ಎಂದು ಸಾಕಷ್ಟು ಪ್ರಚಾರ ನೀಡಿದರೂ ಕೆಲವರು ಯಾಮಾರುತ್ತಾರೆ. ಹಣ ಕಳೆದುಕೊಳ್ಳುವುದು ವಿಪರ್ಯಾಸ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin