ಗಿರವಿ ಅಂಗಡಿಯಲ್ಲಿ 1.20 ಲಕ್ಷ ಹಣ,ಚಿನ್ನಾಭರಣ ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

thifte

ತುಮಕೂರು, ಅ.20- ಗಿರವಿ ಅಂಗಡಿಯೊಂದರ ರೋಲಿಂಗ್ ಶೆಟರ್ ಮೀಟಿದ ಚೋರರು 1.20 ಲಕ್ಷ ರೂ. ಹಣ, ಅಪಾರ ಮೌಲ್ಯದ ಚಿನ್ನಾಭರಣ ದೋಚಿದ್ದಲ್ಲದೆ ಎಂಎಸ್‍ಐಎಲ್ ಅಂಗಡಿಯಲ್ಲೂ ಕಳ್ಳತನ ನಡೆಸಿರುವ ಘಟನೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ದೇವಿಲಾಲ್ ಎಂಬುವರಿಗೆ ಸೇರಿದ ಗಿರವಿ ಅಂಗಡಿ ಹಾಗೂ ರವಿಕುಮಾರ್ ಎಂಬುವರಿಗೆ ಸೇರಿದ ಎಂಎಸ್‍ಐಎಲ್ ಅಂಗಡಿಯಲ್ಲಿ ರೋಲಿಂಗ್ ಶೆಟರ್ ಮೀಟಿ ಕಳ್ಳತನ ನಡೆಸಿದ್ದಾರೆ. ಗಿರವಿ ಅಂಗಡಿಯ ರೋಲಿಂಗ್ ಶೆಟರ್ ಮೀಟಿ 1.20 ಲಕ್ಷ ಹಣ ಸೇರಿದಂತೆ ಅಪಾರ ಬೆಲೆಯ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಲ್ಲದೆ, ಎಂಎಸ್‍ಐಎಲ್ ಅಂಗಡಿಯಲ್ಲೂ ಕಳ್ಳತನ ನಡೆಸಿ ಅಪಾರ ಪ್ರಮಾಣದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಇಂದು ಬೆಳಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ರೋಲಿಂಗ್ ಶೆಟರ್ ಮೀಟಿರುವುದು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಅಂಗಡಿಗಳ ಮುಂದೆ ಜನಸಾಗರವೇ ಸೇರಿತ್ತು. ಸ್ಥಳಕ್ಕಾಗಮಿಸಿದ ಕೋರಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಸ್ಥಳಕ್ಕೆ ಶ್ವಾನದಳ, ಬೆರಳಚ್ಚುತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin