ಗೀತಾಂಜಲಿ ಗರ್ಗ್ ಕೊಲೆ ಪ್ರಕರಣ : ಮಾಜಿ ಮ್ಯಾಜಿಸ್ಟ್ರೇಟ್ ಅರೆಸ್ಟ್ ಮಾಡಿದ ಸಿಬಿಐ

ಈ ಸುದ್ದಿಯನ್ನು ಶೇರ್ ಮಾಡಿ

Geetanjali

ಚಂಡೀಗಢ, ಸೆ.9-ಪತ್ನಿ ಗೀತಾಂಜಲಿ ಗರ್ಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್‍ಗಾಂವ್‍ನ ಮಾಜಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಅವರನ್ನು ಸಿಬಿಐ ಬಂಧಿಸಿದೆ. ಗಂಡುಮಗುವಿಗೆ ಜನ್ಮ ನೀಡಿಲ್ಲ ಎಂಬ ಕಾರಣಕ್ಕೆ ಗೀತಾಂಜಲಿಯನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ಕುಟುಂಬ ಆಪಾದಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣ ಇಡೀ ರಾಜ್ಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿತ್ತು. ಗೀತಾಂಜಲಿ (27) ಅವರ ಮೃತದೇಹ ಮನೆಪಕ್ಕದ ಪಾರ್ಕ್‍ನಲ್ಲಿ ಜುಲೈ 17ರಂದು ಪತ್ತೆಯಾಗಿತ್ತು. ಗುಂಡು ತಗುಲಿದ ಹಲವು ಗಾಯಗಳು ಆಕೆಯ ಮೈಮೇಲೆ ಇದ್ದವು. ರಣವೀತ್ ಗರ್ಗ್ ವಿರುದ್ಧ ಗೀತಾಂಜಲಿ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿತ್ತು. ರಣವೀತ್ ಈಗ ಕೈತಾಲ್ ಸಿವಿಲ್ ನ್ಯಾಯಾಧೀಶ (ಹಿರಿಯ ಶ್ರೇಣಿ) ಆಗಿದ್ದು, ಆತನನ್ನು ಬಂಧಿಸಲಾಯಿತು.

ಇನ್ನೊಂದು ದೂರಿನ ಮೇರೆಗೆ ಆರೋಪಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನೂ ದಾಖಲಿಸಲಾಗಿದೆ. ಆಕೆಗೆ ನಾಲ್ಕು ಹಾಗೂ ಐದು ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯ ಆರೋಪಿಯನ್ನು ಐದು ದಿನಗಳ ವರೆಗೆ ಸಿಬಿಐ ವಶಕ್ಕೆ ನೀಡಿದೆ. 2014ರಲ್ಲಿ ನಡೆಸಿದ ಸುಳ್ಳುಪತ್ತೆ ಪರೀಕ್ಷೆ ಫಲಿತಾಂಶದ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಸುಳ್ಳುಪತ್ತೆ ಪರೀಕ್ಷೆಯಲ್ಲಿ ಮೋಸಗೊಳಿಸುವಂಥ ಉತ್ತರಗಳು ಸಿಕ್ಕಿದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ವಿಚಾರಣೆಗಾಗಿ ಸಿಬಿಐ ವಶಕ್ಕೆ ನೀಡಬೇಕು ಎಂದು ವಿಶೇಷ ನ್ಯಾಯಾಧೀಶ ಕಪಿಲ್ ರಾಠಿ ಅವರಿಗೆ ಸಿಬಿಐ ಮನವಿ ಮಾಡಿತ್ತು. ಆದರೆ ಐದು ದಿನಗಳ ಕಾಲ ಮಾತ್ರ ಆರೋಪಿಯನ್ನು ಸಿಬಿಐ ವಶಕ್ಕೆ ನೀಡಲಾಗಿದೆ. ದರೆ ಆರೋಪಿ ವಿರುದ್ಧ ಯಾವ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎನ್ನುವುದನ್ನು ಸಿಬಿಐ ಬಹಿರಂಗಪಡಿಸಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin