ಗುಂಡಿಗೆ ಗಟ್ಟಿ ಇದ್ರೆ ಮಾತ್ರ ಈ ವಿಡಿಯೋ ನೋಡಿ…!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ ಸೆ. 20 : ದೆಹಲಿಯಲ್ಲಿ ಸಾರ್ವಜನಿಕರೆದುರೆ 21 ವರ್ಷದ ಶಿಕ್ಷಕಿಗೆ ಯುವಕನೊಬ್ಬ ಬರೋಬ್ಬರಿ 22 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. 21 ವರ್ಷದ ಕರುಣಾ ಕಳೆದ ಒಂದು ವರ್ಷದಿಂದ 34 ವರ್ಷದ ಸುರೇಂದರ್ ಆಕೆಯನ್ನು ಹಿಂಬಾಲಿಸುವುದು ಹಾಗೂ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಕರುಣಾಳನ್ನು ಹಿಂಬಾಲಿಸಿಕೊಂಡು ಬಂದ ಸುರೇಂದರ್ ಆಕೆಗೆ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ವೇಳೆ ಘಟನಾ ಸ್ಥಳದಲ್ಲಿ ಹತ್ತಾರು ಮಂದಿಯಿದ್ದರು ಭಯದಿಂದ ಓಡಿ ಹೋದರೆ ಹೊರತು ಯುವತಿಯ ರಕ್ಷಣೆಗೆ ಮಾತ್ರ ಬರಲಿಲ್ಲ.

ಕರುಣಾ ಪೋಷಕರು ಕಳೆದ ಐದು ತಿಂಗಳ ಹಿಂದೆ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದರು. ಬಳಿಕ ಎರಡು ಕುಟುಂಬಗಳು ರಾಜಿ ಮಾಡಿಕೊಂಡಿದ್ದರಿಂದ ನಾವು ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸುರೇಂದರ್ ಗೆ ಮದುವೆಯಾಗಿದ್ದು ಆತನ ವಿಚ್ಛೇದನ ಪ್ರಕರಣ ಇನ್ನು ವಿಚಾರಣೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin