ಗುಂಡುಪಾರ್ಟಿಯಲ್ಲಿ ಮೋಜುಮಸ್ತಿ ಮಾಡುತ್ತಿದ್ದ 250ಕ್ಕೂ ಹೆಚ್ಚು ಗಣ್ಯರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

200-Arrested

ವಡೋದರ,ಡಿ.23-ಗುಜರಾತ್‍ನಲ್ಲಿ ಪಾನ ನಿಷೇಧ ಜಾರಿಯಲ್ಲಿದ್ದೂ ನಿಯಮ ಉಲ್ಲಂಘಿಸಿ ಭರ್ಜರಿ ಗುಂಡು ಪಾರ್ಟಿ ನಡೆಸುತ್ತಿದ್ದ ಮಹಿಳೆಯರೂ ಸೇರಿದಂತೆ 250ಕ್ಕೂ ಹೆಚ್ಚು ಗಣ್ಯರನ್ನು ಪೊಲೀಸರು ಬಂಧಿಸಿ ಅನೇಕ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.  ವಡೋದರದ ತೋಟದ ಮನೆಯಲ್ಲಿ ನಿನ್ನೆ ಮದುವೆ ಸಮಾರಂಭವೊಂದು ನಡೆಯುತ್ತಿತ್ತು. ಅಲ್ಲಿ ಅತಿ ಗಣ್ಯರು ಮತ್ತು ಪ್ರಭಾವಿಗಳು ಸೇರಿದ್ದರು. ಇವರಿಗಾಗಿ ಫಾರಂಹೌಸ್‍ನ ಪ್ರತ್ಯೇಕ ಸ್ಥಳದಲ್ಲಿ ಗುಂಡು ಪಾರ್ಟಿ ಕೂಡ ಆಯೋಜಿಸಲಾಗಿತ್ತು.

ಕಂಠಪೂರ್ತಿ ಮದ್ಯ ಸೇವಿಸಿ ಮೋಜು-ಮಸ್ತಿ ನಡೆಸುತ್ತಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು. ತಕ್ಷಣ ದಾಳಿ ನಡೆಸಿದ ಪೊಲೀಸರು 250ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ವಿವಿಐಪಿಗಳು, ಮಹಿಳೆಯರು ಮತ್ತು ಪ್ರಭಾವಿ ವ್ಯಕ್ತಿಗಳು ಪಾಲ್ಗೊಂಡಿದ್ದರು. ಈ ಸ್ಥಳದಲ್ಲಿದ್ದ ಬಿಎಂಡಬ್ಲ್ಯೂ, ಮರ್ಸಿಡಿಸ್‍ಬೆಂಜ್, ವೋಲ್ಸ್‍ವ್ಯಾಗನ್, ಮೊದಲಾದ ದುಬಾರಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಬಂಧಿತರನ್ನು ಸಿವಿಲ್ ಕೋರ್ಟ್‍ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin