ಗುಂಡುಪ್ರಿಯರಿಗೊಂದು ಕಹಿ ಸುದ್ದಿ, ಏ.20ರಂದು ಸಿಗಲ್ಲ ಎಣ್ಣೆ..!

ಈ ಸುದ್ದಿಯನ್ನು ಶೇರ್ ಮಾಡಿ

Alcohal--01

ಬೆಂಗಳೂರು, ಏ.7- ಕರ್ನಾಟಕ ಅಬಕಾರಿ ನಿಯಮ 5 ತಿದ್ದುಪಡಿ ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏ.20ರಂದು ರಾಜ್ಯವ್ಯಾಪಿ ಮದ್ಯಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯಮಾರಾಟಗಾರರ ಸಂಘ ತಿಳಿಸಿದೆ. ಮದ್ಯಮಾರಾಟಗಾರರ ಸಂಘದ ಪ್ರಧಾನಕಾರ್ಯದರ್ಶಿ ಗೋವಿಂದರಾಜ ಹೆಗಡೆ, ಅಧ್ಯಕ್ಷ ಎಸ್.ಗುರುಸ್ವಾಮಿ ಮತ್ತಿತರರು ಮಾತನಾಡಿ, ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದಾಗಿ ರಾಜ್ಯದಲ್ಲಿ 6018 ಲೈಸೆನ್ಸ್ ರದ್ದಾಗಲಿವೆ, ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಲಿವೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಕರ್ನಾಟಕ ಅಬಕಾರಿ ನಿಯಮ 5ಗೆ ತಿದ್ದುಪಡಿ ತರಬೇಕು, ಎಲ್ಲೆಲ್ಲಿ ಬಾರ್‍ಗಳಿವೆಯೂ ಅಲ್ಲಲ್ಲಿ ಹಾಗೆ ಮುಂದುವರೆಸಬೇಕು ಎಂದರು.

ರಾಜ್ಯ ಹೆದ್ದಾರಿಗಳನ್ನು ಜಿಲ್ಲಾ ಮುಖ್ಯರಸ್ತೆಗಳನ್ನಾಗಿ ಪರಿವರ್ತನೆ ಮಾಡಬೇಕು. ಬಾರ್ ಲೈಸೆನ್ಸ್‍ಗಳನ್ನು ಸೆ.30ರವರೆಗೆ ವಿಸ್ತರಿಸಬೇಕು. ಪ್ರಮುಖವಾಗಿ ಸುಪ್ರೀಂಕೋರ್ಟ್ ಆದೇಶ ಪರಿಷ್ಕರಣೆಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಬೇಕು ಎಂದು ಒತ್ತಾಯಿಸಿದರು.  ಏ.20ರಂದು ರಾಜ್ಯವ್ಯಾಪ್ತಿ ಮದ್ಯ ಮಾರಾಟ ಬಂದ್ ನಡೆಸುವುದಲ್ಲದೆ, ನಗರದ ಮೌರ್ಯ ವೃತ್ತದಿಂದ ಮುಖ್ಯಮಂತ್ರಿ ನಿವಾಸದವರೆಗೆ ಜಾಥಾ ನಡೆಸಲಾಗುವುದು. ಅದಕ್ಕೂ ಮುನ್ನ ಅಂದರೆ ಏ.15ರಿಂದ 18ರವರೆಗೆ ಎಲ್ಲಾ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಸಿಎಲ್2ನಲ್ಲಿ 2583, ಸಿಎಲ್4ನಲ್ಲಿ 112, ಸಿಎಲ್6ಎನಲ್ಲಿ 19, ಸಿಎಲ್7ನಲ್ಲಿ 697, ಸಿಎಲ್9ನಲ್ಲಿ 1049, ಸಿಎಲ್11ಸಿನಲ್ಲಿ 255 ಬಾರ್‍ಗಳು ಬರಲಿದ್ದು, ಇದರಿಂದ ರಾಜ್ಯದಲ್ಲಿರುವ ಒಟ್ಟಾರೆ 10,097 ಬಾರ್‍ಗಳಲ್ಲಿ ಸಾಕಷ್ಟು ಬಾರ್‍ಗಳ ಲೈಸೆನ್ಸ್ ರದ್ದಾಗಲಿದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದರು.   ಈ ಸಂದರ್ಭದಲ್ಲಿ ಖಜಾಂಚಿ ನೆಹರ್‍ವಾಡೆ, ರಮೇಶ್ ಸಾಲಗಾರ್ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin