ಗುಂಡು ಹಾರಿಸಿಕೊಂಡು ಠಾಣೆಯಲ್ಲೇ ಮಾಲೂರು ಸರ್ಕಲ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Raghavendra-Suicide

ಕೋಲಾರ ಅ.18 : ಪೊಲೀಸರ ಆತ್ಮಹತ್ಯೆ ಸರಣಿ ಮುಂ ದುವರೆದಿದ್ದು ಮಾಲೂರು ತಾಲೂಕಿನ ಸರ್ಕಲ್ ಇನ್ಸ್‌ಪೆಕ್ಟರ್ ಠಾಣೆಯಲ್ಲೇ ರಾಘವೇಂದ್ರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರು ತಿಂಗಳ ಹಿಂದಷ್ಟೆ ಮಾಲೂರು ಠಾಣೆಗೆ ಕರ್ತವ್ಯಕ್ಕೆ ಬಂದಿದ್ದ ರಾಘವೇಂದ್ರ ಅವರು ಸೋಮವಾರ ಮಧ್ಯರಾತ್ರಿ ಸರ್ವಿಸ್ ರಿವಾಲ್ವಾರ್‍‍ನಿಂದ ಮಾಲೂರು ಠಾಣೆಯಲ್ಲೇ ಗುಂಡು ಹಾರಿಸಿಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ತಡರಾತ್ರಿ ವೃತ್ತ ನಿರೀಕ್ಷಕ ರಾಘವೇಂದ್ರ ತನ್ನ ರಿವಾಲ್ವರ್’ನಿಂದ ಠಾಣೆಯ ತನ್ನ ಕೋಣೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ರೌಂಡ್ಸ್’ಗೆ ಹೋಗಿ ಬಂದು ಏಕಾಏಕಿ ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವುದು ಬಹಳ ಸಂಶಯಗಳನ್ನು ಹುಟ್ಟುಹಾಕಿದೆ.ರಾಘವೇಂದ್ರ ಅವರು ಡೆತ್ ನಾಟ್ ಬರೆದಿಟ್ಟು ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದಾಗಿ ರತಿಳಿದು ಬಂದಿದೆ.

Raghavendra-2

ರಾಘವೇಂದ್ರ ಕಳೆದ 2012, 2013, 2014 ರಲ್ಲಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕಾರ್ಯ ನಿರ್ವಹಿಸಿದ್ದರು.
2014 ರಲ್ಲಿ ಲೋಕಾಯುಕ್ತ ದಾಳಿಗೆ ಒಳಗಾದ ನಂತರ ಒಂದು ವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು. ನಂತರ ಲೋಕಾಯುಕ್ತ ಪ್ರಕರಣದಿಂದ ಮುಕ್ತರಾದ ಮೇಲೆ ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳಿಂದ ತನಿಖೆ ಮುಂದುವರೆದಿದ್ದು ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin