ಗುಂಡು ಹಾರಿಸಿದ್ದು ತಂದೆಯೋ..ಮಗನೋ..?

ಈ ಸುದ್ದಿಯನ್ನು ಶೇರ್ ಮಾಡಿ

Amith-Shruthi-Firing

ಬೆಂಗಳೂರು, ಜ.14- ವಕೀಲ ಅಮಿತ್‍ನನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣ ಸಂಬಂಧ ಗೊಂದಲದ ಹೇಳಿಕೆ ನೀಡುತ್ತಿರುವ ತಂದೆ -ಮಗನನ್ನು ಬಂಧಿಸಿರುವ ಸೋಲದೇವನಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬಂಧಿತರಾದ ತಂದೆ ಗೋಪಾಲಕೃಷ್ಣ, ಮಗ ರಾಜೇಶ್ ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ನಾನು ಗುಂಡು ಹಾರಿಸಿದೆ ಎಂದು ಹೇಳುತ್ತಿದ್ದಾರೆ. ಗೊಂದಲ ಇರುವ ಕಾರಣ ಇಬ್ಬರನ್ನೂ ಬಂಧಿಸಲಾಗಿದೆ. ಎಫ್‍ಎಸ್‍ಎಲ್‍ನ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಅವರ ವರದಿ, ಎಸಿಪಿಯವರ ತನಿಖಾ ವರದಿ ಮತ್ತು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಗುಂಡು ಹಾರಿಸಿದ್ದು ಯಾರು ಎಂಬುದು ಗೊತ್ತಾಗಲಿದೆ ಎಂದು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ನಿನ್ನೆಯ ಘಟನೆಗೂ ಮುಂಚೆ ಗೋಪಾಲಕೃಷ್ಣ ಮತ್ತು ರಾಜೇಶ್ ಎಲ್ಲಿದ್ದರು, ಇಬ್ಬರೂ ಜತೆಯಲ್ಲೇ ಸ್ಥಳಕ್ಕೆ ಬಂದಿದ್ದರೇ ಅಥವಾ ಘಟನಾ ಸ್ಥಳದಲ್ಲಿ ಯಾರು ಇದ್ದರು ಎಂಬುದು ತಿಳಿದುಬರಲಿದೆ ಎಂದು ಹೇಳಿದ್ದಾರೆ. ಈ ಎಲ್ಲಾ ಮಾಹಿತಿಯ ಬಳಿಕ ಗುಂಡು ಹಾರಿಸಿದವರು ಯಾರು ಎಂಬುದು ನಿಖರವಾಗಲಿದೆ ಎಂದು ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಪಿಸ್ತೂಲನ್ನು ವಶಪಡಿಸಿಕೊಂಡಿದ್ದೇವೆ. ಅದು ಆತ್ಮಹತ್ಯೆ ಮಾಡಿಕೊಂಡಿರುವ ಪಿಡಿಒ ಶೃತಿ ಅವರ ಪತಿ ರಾಜೇಶ್ ಹೆಸರಿನಲ್ಲಿ ಲೈಸೆನ್ಸ್ ಹೊಂದಿದೆ ಎಂದು ಹೇಳಿದ್ದಾರೆ.ವಕೀಲ ಅಮಿತ್ ಶವಪರೀಕ್ಷೆ ಸಪ್ತಗಿರಿ ಆಸ್ಪತ್ರೆಯಲ್ಲಿ ಶೃತಿಗೌಡ ಅವರ ಶವಪರೀಕ್ಷೆಯನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಡೆಸಿ ವಾರಸುದಾರರಿಗೆ ಶವ ಒಪ್ಪಿಸಲಾಗಿದೆ.

ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಶೃತಿಗೌಡ ಅವರ ಪತಿ ಹಿಂಬಾಲಿಸಿ ಪತ್ನಿ ಜತೆಗಿದ್ದ ವಕೀಲ ಅಮಿತ್‍ಗೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಘಟನೆಯಿಂದ ವಿಚಲಿತಗೊಂಡ ಪಿಡಿಒ ಶೃತಿ ಕಾರು ಚಲಾಯಿಸಿಕೊಂಡು ಬಂದು ಸಪ್ತಗಿರಿ ಆಸ್ಪತ್ರೆಗೆ ಆಮಿತ್‍ನನ್ನು ದಾಖಲಿಸಿದ್ದಾರೆ . ಅಮಿತ್ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಶೃತಿ ಅವರು ಲಾಡ್ಜ್‍ವೊಂದಕ್ಕೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin