ಗುಂಡೇಟಿನಿಂದ ಗಾಯಗೊಂಡಿದ್ದ ಹಿರಿಯ RSS ನಾಯಕ ಜಗದೀಶ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

sasfASF

ಲೂಧಿಯಾನ, ಸೆ.22-ಜಲಂಧರ್‍ನಲ್ಲಿ ಕಳದ ಆಗಸ್ಟ್ ನಲ್ಲಿ ಅಪರಿಚಿತ ಹಂತಕರಿಂದ ಗುಂಡೇಟಿಗೆ ಒಳಗಾಗಿದ್ದ ಆರ್‍ಎಸ್‍ಎಸ್‍ನ ಹಿರಿಯ ನಾಯಕ ಜಗದೀಶ್ ಗಗ್ನೇಜ್ ಇಂದು ಬೆಳಿಗ್ಗೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಲೂಧಿಯಾನದ ಹೀರೋ ಡಿಎಂಸಿ ಹಾರ್ಟ್ ಇನ್ಸ್‍ಟಿಟ್ಯೂಟ್‍ನಲ್ಲಿ 65 ವರ್ಷದ ಗಗ್ನೇಜ್ ಕೊನೆಯುಸಿರೆಳೆದರು ಎಂದು ಸಂಸ್ಥೆಯ ನಿರ್ದೇಶಕ ಡಾ.ಜಿ.ಎಸ್.ವಾಂಡರ್ ಹೇಳಿದ್ದಾರೆ.   ಜಲಂಧರ್‍ನಲ್ಲಿ ಆಗಸ್ಟ್ 6ರಂದು ಮೋಟಾರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳ ಬ್ರಿಗೇಡಿಯರ್ (ನಿವೃತ್ತ) ಗಗ್ನೇಜ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ನಂತರ ಸಿಬಿಐ ತನಿಖೆ ವಹಿಸಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin