ಗುಜರಾತ್‍ನಲ್ಲಿ ಇಬ್ಬರು ಐಎಸ್ ಉಗ್ರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ISIS--01

ಅಹಮದಾಬಾದ್, ಫೆ.26-ವಿಶ್ವದ ಅತ್ಯುಗ್ರ ಭಯೋತ್ಪಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಉಗ್ರರನ್ನು ಗುಜರಾತ್‍ನ ರಾಜ್‍ಕೋಟ್ ಮತ್ತು ಭಾವನಗರದಲ್ಲಿ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಸಿಬ್ಬಂದಿ ಬಂಧಿಸಿದ್ದಾರೆ.   ಐಎಸ್ ಉಗ್ರರು ದಾಳಿ ನಡೆಸಲು ಭಾರತದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಗುಪ್ತಚರ ವರದಿಗಳ ಬೆನ್ನಲ್ಲೇ ಈ ಇಬ್ಬರನ್ನು ಸೆರೆಹಿಡಿಯಲಾಗಿದೆ.   ವಾಸೀಮ್ ಮತ್ತು ನಯೀಮ್ ಬಂಧಿತ ಉಗ್ರರಾಗಿದ್ದು, ಇವರಿಬ್ಬರ ಸಹೋದರರು. ಸುಶಿಕ್ಷಿತರಂತೆ ಕಾಣುವ ಇವರು ಐಎಸ್ ನೆರವಿನಿಂದ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಜ್ಜಾಗಿದ್ದ ಸಂಗತಿ ಬಯಲಾಗಿದೆ. ಇವರ ಬಂಧನದೊಂದಿಗೆ ಇದೇ ಮೊದಲ ಬಾರಿ ದೇಶದಲ್ಲಿ ಐಎಸ್ ಉಗ್ರರೊಂದಿಗೆ ನೇರ ಸಂಪರ್ಕ ಹೊಂದಿದ್ದವರು ಸೆರೆ ಸಿಕ್ಕಿದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin