ಗುಜರಿಗೆ ಬೆಂಕಿ ಅಪಾರ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

kolara
ಕೋಲಾರ, ಏ.27- ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಕೋಲಾರ ವರದಿ: ನಗರದ ಕಠಾರಿಪಾಳ್ಯದಲ್ಲಿರುವ ವಿನಯ್ ಪೇಪರ್ ಡಿಪೋ ಗೆ ಸೇರಿದ ಗುಜರಿ ದಾಸ್ತಾನು ಮಳಿಗೆ ವಸ್ತುಗಳಿಗೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಇದರಿಂದ ಅಕ್ಕಪಕ್ಕದ ಮನೆಗಳ ಕಿಟಕಿ-ಬಾಗಿಲುಗಳು, ಕರ್ಟನ್‍ಗಳು ಹಾಗೂ ಕಂಪ್ಯೂಟರ್ ಸೆಂಟರ್‍ಗೆ ಭಾರೀ ಹಾನಿಯುಂಟಾಗಿದೆ.
ನಾಗರಾಜಯ್ಯ ಅವರಿಗೆ ಸೇರಿದ ವಿನಯ್ ಪೇಪರ ಡಿಪೋ  ಮತ್ತು ಗುಜರಿ ದಾಸ್ತಾನು ಮಳಿಗೆಗೆ ಬೆಂಕಿ ಬಿದ್ದಿದ್ದು, ಆತನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ರಾಘವೇಂದ್ರ ನೇತೃತ್ವದ ತಂಡ ಬೆಂಕಿ ನಂದಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಗಾರಪೇಟೆ ವರದಿ: ಶಾರ್ಟ್ ಸಕ್ರ್ಯೂಟ್‍ನಿಂದ ಫ್ಯಾನ್ಸಿ ಸ್ಟೋರ್‍ಗೆ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್‍ಗೆ ಬೆಂಕಿ ಬಿದ್ದಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಅಂಗಡಿ ಮಾಲೀಕ ಬೆಂಕಿ ನಂದಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin