ಗುಡಿಸಲಿಗೆ ಬೆಂಕಿ ಬಿದ್ದು 9 ತಿಂಗಳ ಮಗು ಸಜೀವ ದಹನ
ಈ ಸುದ್ದಿಯನ್ನು ಶೇರ್ ಮಾಡಿ
ಕೊಳ್ಳೇಗಾಲ, ಫೆ.10- ಗುಡಿಸಲಿಗೆ ಬೆಂಕಿ ಬಿದ್ದು 9 ತಿಂಗಳ ಹಸುಗೂಸು ಸಾವನ್ನಪ್ಪಿರುವ ಧಾರುಣ ಘಟನೆ ಮಹದೇಶ್ವರ ಬೆಟ್ಟದ ಆಲಂಬಾಡಿ ಗ್ರಾಮದಲ್ಲಿ ನಡೆದಿದೆ.
ಆನೆಗಳನ್ನು ನಿಯಂತ್ರಿಸಲು ಹಾಕಿದ್ದ ಬೆಂಕಿ ಗುಡಿಸಲಿಗೆ ತಾಕಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸುರೇಶ್ ಮತ್ತು ಲಕ್ಷ್ಮಿ ದಂಪತಿ ತಮ್ಮ 9 ತಿಂಗಳ ಮಗುವನ್ನು ಗುಡಿಸಲಿನಲ್ಲಿ ಮಲಗಿಸಿ ಹೊರಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಬೆಂಕಿ ಕಿಡಿ ತಗುಲಿರುವುದು ಇವರಿಗೆ ತಿಳಿಯಲಿಲ್ಲ. ಸಂಜೆ ನೋಡಿದಾಗ ಗುಡಿಸಲು ಭಸ್ಮವಾಗಿರುವುದನ್ನು ನೋಡಿದಾಗ ಮಗು ಸುಟ್ಟು ಕರಕಲಾಗಿರುವುದನ್ನು ಕಂಡು ದುಃಖದ ಕಟ್ಟೆ ಒಡೆದಿದೆ.
ಇವರ ಆಕ್ರಂದನ ನೋಡಿ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಮಾಧಾನ ಪಡಿಸಿದ್ದಾರೆ. ಸ್ಥಳಕ್ಕೆ ಮಹದೇಶ್ವರಬೆಟ್ಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments