ಗುಡ್ಡಗಾಡು ಓಟದ ಸ್ಪರ್ಧೆಗೆ 13 ವಿದ್ಯಾರ್ಥಿಗಳ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

spords-in-childrens

ಚಿಕ್ಕಬಳ್ಳಾಪುರ, ಆ.19- ಕನಕಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಬೆಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 13 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಬಾಲಕರಿಗೆ 12.5 ಕಿ.ಮೀ. ಮತ್ತು ಬಾಲಕಿಯರಿಗೆ 8 ಕಿ.ಮೀ ದೂರದ ಓಟದ ಸ್ಪರ್ಧೆಗೆ ಆರ್. ಕೆ. ಭವ್ಯ, ಎಮ್.ಪಾವನ, ಜಿ.ರಶ್ಮಿ, ಜಿ.ಎನ್ ಅಮೃತ, ಡಿ.ವಿ ಲಾವಣ್ಯ, ಆರ್.ರಂಜಿತ, ಎ.ವಿ.ಶಿಲ್ಪ, ಚಂದ್ರಕಾಂತ್.ಕೆ, ಶಿವಕುಮಾರ್.ಎಲ್.ವಿ, ಕಾರ್ತಿಕ್.ಕೆ, ರಾಜೇಶ್‍ಕುಮಾರ್.ಎನ್, ನಾಗೇಶ್.ವಿ ಮಧು.ಪಿ.ಎಂ ಆಯ್ಕೆಯಾಗಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಎಲ್. ನಾರಾಯಣಸ್ವಾಮಿ. ದೈಹಿಕ ಶಿಕ್ಷಕಿ ಎಸ್.ಗಿರಿಜ, ತಂಡದ ತರಬೇತಿದಾರರಾಗಿ ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ ತಂಡದೊಂದಿಗೆ ತೆರಳುತ್ತಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin