ಗುತ್ತಿಗೆ ನೌಕರರ ಪ್ರಾಣದ ಜೊತೆ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಅಧಿಕಾರಿಗಳ ಚಲ್ಲಾಟ

ಈ ಸುದ್ದಿಯನ್ನು ಶೇರ್ ಮಾಡಿ

KPTCL--1

ತಿಪಟೂರು, ಜು.6- ಕೆ.ಪಿ.ಟಿ.ಸಿ.ಎಲ್. ಹಾಗೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಮನ್ವಯ ಕೊರತೆಯಿಂದಾಗಿ ದಿನಗೂಲಿ ನೌಕರರು ಪ್ರತಿನಿತ್ಯ ಸಾವಿನ ಮನೆ ಕದ ತಟ್ಟುವಂತಾಗಿದೆ. ಇದನ್ನು ಖಂಡಿಸಿ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ :

ರೈಲ್ವೆ ಇಲಾಖೆಯ 11 ಕೆ.ವಿ. ಮಾರ್ಗವನ್ನು ಸ್ಥಳಾಂತರ ಮಾಡಿ ಡಬಲ್ ಕೇಬಬಲ್ ಅಳವಡಿಸುವ ಸಲುವಾಗಿ ಬೆಸ್ಕಾಂ ಇಲಾಖೆಗೆ ಶೇ.10 ರಷ್ಟು ಹಣ ನೀಡಿ ಕಾಮಾಗಾರಿಯನ್ನು ಮಾಡುವಂತೆ ಮನವಿ ಮಾಡಿದ್ದರು. ಈ ಕಾಮಗಾರಿಯನ್ನು ಮಾಡುವಂತೆ ಬೆಸ್ಕಾಂ ಇಲಾಖೆ ರೈಲ್ವೇ ಇಲಾಖೆಗೆ ಆದೇಶಿಸಿ ಆದೇಶವನ್ನು ನೀಡಿದೆ. ಇದರ ಅನ್ವಯ ಸ್ಥಳೀಯ ಗುತ್ತಿಗೆಗಾರರಾಗಿರುವ ಅಪೇಕ್ಷ ಎಲೆಕ್ಟ್ರೀಕಲ್ಸ್‍ಗೆ ಕಾಮಗಾರಿಯನ್ನು ವಹಿಸಿರುತ್ತಾರೆ.

ಅದರಂತೆ ಬೆಸ್ಕಾಂ ಅಧಿಕಾರಿ ಜೆ.ಈ. ತೋಂಟಾರಾಧ್ಯ ವಿದ್ಯುತ್ ನಿಲುಗಡೆಗೆ ಕೋರಿ ಕೆ.ಪಿ.ಟಿ.ಸಿ.ಎಲ್.ನ ಗೋವಿನಪುರದ ಎಂ.ಯು.ಎಸ್.ಎಸ್. ಘಟಕದ ಅಪರೇಟರ್‍ಗೆ 9 ಫೀಡಲ್ ಲೈನ್‍ಗಳಾದ ಎಫ್.8, ಎಫ್.14, ಎಫ್.3, ಎಫ್.7, ಎಫ್.15, ಎಫ್.4, ಎಫ್.2, ಎಫ್.13, ಎಫ್.16 ಗಳ ವಿದ್ಯುತ್ ನಿಲುಗಡೆಗೆ ಸಮಯದಲ್ಲಿ ಕೋರಿದ್ದಾರೆ.  ಅದರಂತೆ ಶಿಫ್ಟ್ ಅಪರೇಟರ್ ಶಿವಕುಮಾರ್ ವಿದ್ಯುತ್ ನಿಲುಗಡೆಯನ್ನು ನಂ.637 ರ ಅನ್ವಯ ನೀಡಿದ್ದಾರೆ. ನಂತರ ಮಾರನಗೆರೆ ರೈಲ್ವೇ ಗೇಟ್ ಬಳಿಯಲ್ಲಿ ಎಫ್.7ರಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಅರ್ಥಿಂಗ್ ಮಾಡಿ 9 ಜನ ಕಾರ್ಮಿಕರು ಕಾರ್ಯನಿರ್ವಹಣೆಯನ್ನು ಪ್ರಾರಂಭಿಸಿದ್ದಾರೆ.

ಅರ್ಧ ಗಂಟೆಯ ನಂತರದಲ್ಲಿ ಮಾಹಿತಿಯನ್ನು ನೀಡದೇ ಎಫ್.7 ಲೈನ್‍ಗೆ ವಿದ್ಯುತ್ ಸಂಪರ್ಕವನ್ನು ಕೆ.ಪಿ.ಟಿ.ಸಿ.ಎಲ್ ನಿಂದ ನೀಡಿದ್ದಾರೆ. ಕಂಬದ ಮೇಲೆ ಕೆಲಸ ನಿರ್ವಹಿಸುತ್ತಿದ್ದ 3 ಜನ ಕೂಲಿ ಕಾರ್ಮಿಕರಿಗೆ ವಿದ್ಯುತ್ ಬಂದಿದ್ದು ತಿಳಿದು ತಕ್ಷಣವೇ ಕಂಬದ ಮೇಲಿನಿಂದ ಕೆಳಕ್ಕೆ ನೆಗೆದು ಪ್ರಾಣ ಉಳಿಸಿಕೊಂಡಿದ್ದಾರೆ.  ಇದನ್ನು ಖಂಡಿಸಿ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಕೆ.ಪಿ.ಟಿ.ಸಿ.ಎಲ್. ನ ನೋಡಲ್ ಅಧಿಕಾರಿ ತಿಮ್ಮೇಗೌಡ ಘಟನೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಎರಡೂ ಕಡೆಯಿಂದ ಪಡೆದು ಮೇಲಧಿಕಾರಿಗಳಿಗೆ ವರದಿಯನ್ನು ನೀಡುವುದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin