ಗುಪ್ತಾಂಗವನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿದ ಭಕ್ತ ಮಹಾಶಯ..!

ಈ ಸುದ್ದಿಯನ್ನು ಶೇರ್ ಮಾಡಿ

Man-Cut-Private-Part

ಒಡಿಸ್ಸಾ, ಮಾ.6-ಒಡಿಸ್ಸಾದಲ್ಲಿ ವ್ಯಕ್ತಿಯೊಬ್ಬ ಅತಿರೇಕದ ಭಕ್ತಿಯನ್ನು ಪ್ರದರ್ಶಿಸಿದ್ದಾನೆ. ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಳ್ಳುವ ಮೂಲಕ ಈಶ್ವರನಿಗೆ ಹರಕೆ ಸಲ್ಲಿಸಿದ್ದಾನೆ. ಗಂಜಾಂ ಜಿಲ್ಲೆ ಹಲಸು ಗ್ರಾಮದ ನಿವಾಸಿ 40 ವರ್ಷದ ನಟಾಬರ್ ನಾಯಕ್ ಎಂಬಾತ ಊರಿನ ಶಿವನ ದೇವಾಲಯದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ. ಆತನಿಗೆ ಪ್ರಜ್ಞೆ ಕೂಡ ಇರಲಿಲ್ಲ.   ಕಳೆದೆರಡು ದಿನಗಳಿಂದ ದೇವಾಲಯದಲ್ಲೇ ಆತ ಪ್ರಾರ್ಥನೆ ಸಲ್ಲಿಸುತ್ತಿದ್ದ. ಅರ್ಚಕರು ಗುಡಿಯ ಬಾಗಿಲು ಮುಚ್ಚಿಕೊಂಡು ಹೋದ ಮೇಲೂ ದೇವಾಲಯದಲ್ಲೇ ಕುಳಿತಿದ್ದ.  ಬಳಿಕ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದ ಎನ್ನಲಾಗಿದೆ.

ಮೊನ್ನೆ ಅರ್ಚಕರು ಪೂಜೆಗೆಂದು ದೇವಾಲಯಕ್ಕೆ ಆಗಮಿಸಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಟಾಬರ್‍ನನ್ನು ನೋಡಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದುವರೆಗೂ ಆತನಿಗೆ ಪ್ರಜ್ಞೆ ಬಂದಿಲ್ಲ.  ಕಳೆದ ಹಲವು ದಿನಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದ ಈತ ಎಷ್ಟೇ ಚಿಕಿತ್ಸೆ ಪಡೆದರೂ ಈ ರೋಗ ವಾಸಿಯಾಗಿರಲಿಲ್ಲ. ಇದರಿಂದ ನೊಂದು ಈ ರೀತಿ ಹರಕೆ ತೀರಿಸಿರಬಹುದು ಎಂದು ಹೇಳಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin