ಗುರಾಯಿಸಿದಕ್ಕೆ ಗಣೇಶನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Ganersh--01

ಬೆಂಗಳೂರು, ಆ.28- ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಯುವಕರ ನಡುವೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಗಣೇಶ (21) ಕೊಲೆ ಯಾದ ಯುವಕ.ಆವಲಹಳ್ಳಿ ಮುಖ್ಯರಸ್ತೆಯ ಕಾಳಿದಾಸಲೇಔಟ್‍ನಲ್ಲಿ ಗಣೇಶನನ್ನು ಪ್ರತಿಷ್ಠಾಪಿ ಸಲಾಗಿತ್ತು. ನಿನ್ನೆ ಸಂಜೆ 7.30ರಲ್ಲಿ ಈ ಸ್ಥಳದಲ್ಲಿ ಪೃಥ್ವಿ ಎಂಬಾತ ನಿಂತಿದ್ದನು.  ಈ ಸಂದರ್ಭದಲ್ಲಿ ಗಣೇಶ ಹೋಗುತ್ತಿದ್ದಾಗ ಈತನನ್ನು ನೋಡಿದ್ದಾನೆ.
ನನ್ನನ್ನು ಗುರಾಯಿಸುತ್ತಿದ್ದೀಯಾ ಎಂದು ಪೃಥ್ವಿ ಏಕಾಏಕಿ ಗಣೇಶನ ಜೊತೆ ಜಗಳಕ್ಕಿಳಿದಿದ್ದಾನೆ.

ಈ ವೇಳೆ ಇಬ್ಬರು ಕೈ ಕೈ ಮಿಲಾಯಿಸಿಕೊಂಡಿದ್ದು, ಸ್ಥಳೀಯರ ಮಧ್ಯಪ್ರವೇಶದಿಂದ ಈ ಇಬ್ಬರೂ ಅವರವರ ಪಾಡಿಗೆ ಅವರು ತೆರಳಿದ್ದಾರೆ. ಕೆಲ ಸಮಯದ ಬಳಿಕ ಗಣೇಶ ಮತ್ತೆ ಈ ಸ್ಥಳಕ್ಕೆ ಬಂದು ನನಗೇ ಹೊಡೆಯುತ್ತೀಯಾ ಎಂದು ಪೃಥ್ವಿ ಜೊತೆ ಜಗಳಕ್ಕಿಳಿದಾಗ ಪೃಥ್ವಿ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದು, ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ ಒಂದು ಹಂತದಲ್ಲಿ ಗಣೇಶನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಗಣೇಶನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈ ಸಂಬಂಧ ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾಗಿ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin