ಗುರು ಗೋಪಿಚಂದ್ ಅವರನ್ನು ಕೊಂಡಾಡಿದ ಸಿಂಧು

ಈ ಸುದ್ದಿಯನ್ನು ಶೇರ್ ಮಾಡಿ

Gopichand

ಹೈದ್ರಾಬಾದ್,ಆ.25- ಪುಲ್ಲೇಲ ಗೋಪಿ ಚಂದ್ ಅವರು ಉತ್ತಮ ತರಬೇತುದಾರ ಎಂದು ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ.ಸಿಂಧು ಅವರು ತಿಳಿಸಿದ್ದಾರೆ. ಒಲಿಂಪಿಕ್ಸ್ನ ನಂತರ ಪಿ.ವಿ.ಸಿಂಧುಗೆ ಗೋಪಿಚಂದ್ಗಿಂತ ಉತ್ತಮ ತರಬೇತುದಾರರನ್ನು ನೇಮಿಸುವುದಾಗಿ ತೆಲಂಗಾಣ ಉಪಮುಖ್ಯಮಂತ್ರಿ ಮೊಹಮ್ಮದ್ ಅಲಿ ಹೇಳಿದ್ದರೆ.  ಇದಕ್ಕೆ ಪ್ರತಿಕ್ರಿಯಿಸಿದ ಪಿ.ವಿ.ಸಿಂಧು ಅವರು ಪುಲ್ಲೇಲ ಗೋಪಿಚಂದ್ ಅವರ ಗರಡಿಯಲ್ಲಿ ಹಲವಾರು ಟಿಪ್ಸ್ಗಳನ್ನು ಪಡೆದಿದ್ದರಿಂದಲೇ ನಾನು ರಿಯೋ ಒಲಿಂಪಿಕ್ಸ್ನಲ್ಲಿ ವಿಶ್ವದ ನಂಬರ್ 2 ಆಟಗಾರ್ತಿ ವಾಂಗ್ ಇಯಾನ್ ಹಾಗೂ ನಂಬರ್ 6ರ ಶ್ರೇಯಾಂಕಿತ ನೋಜೋಮಿ ಒಕುರೋವಾ ವಿರುದ್ಧ ಗೆದ್ದು ಫೈನಲ್ನಲ್ಲಿ ವಿಶ್ವದ ನಂಬರ್ 1 ಆಟಗಾರ್ತಿ ಕಾರ್ಲೊನಿಯಾ ಮಾರಿನಾ ವಿರುದ್ಧ ಉತ್ತಮ ಹೋರಾಟ ತೋರಿ ಬೆಳ್ಳಿ ಪದಕವನ್ನು ಜಯಿಸಲು ಸಾಧ್ಯವಾಯಿತು ಎಂದು ಪಿ.ವಿ.ಸಿಂಧು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin