ಗುರೇಜ್ ಸೆಕ್ಟರ್‍ನ ಎಲ್‍ಒಸಿ ಬಳಿ ಸೇನೆ ಗುಂಡಿಗೆ ಉಗ್ರ ಬಲಿ, ಐಟಿಬಿಪಿ ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Firing-in-Border

ಶ್ರೀನಗರ, ಜೂ.10-ಕಾಶ್ಮೀರ ಕಣಿವೆಯಲ್ಲಿ ಉಗ್ರರ ನುಸುವಿಕೆ ಮತ್ತು ಸೇನಾಪಡೆಗಳ ಮೇಲೆ ಭಯೋತ್ಪಾದಕರ ದಾಳಿ ಪ್ರಕರಣಗಳು ಮುಂದುವರಿದಿವೆ. ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ)ಯ ಬಳಿ ಒಳನುಸುಳುವ ಉಗ್ರರ ಮತ್ತೊಂದು ಯತ್ನವನ್ನು ಸೇನೆ ವಿಫಲಗೊಳಿಸಿದೆ. ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕನೊಬ್ಬ ಹತನಾಗಿದ್ದಾನೆ.   ಮತ್ತೊಂದೆಡೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದು, ಕೆಲವು ಪೊಲೀಸರು ಗಾಯಗೊಂಡಿದ್ದಾರೆ.ಗುರೇಜ್ ಸೆಕ್ಟರ್‍ನ ಎಲ್‍ಒಸಿ ಬಳಿ ಪಹರೆಯಲ್ಲಿದ್ದ ಯೋಧರಿಗೆ ಗಡಿಯಲ್ಲಿ ಶಂಕಾಸ್ಪದ ಚಲನೆ ಕಂಡುಬಂದಿತು. ಉಗ್ರರು ಒಳನುಸುಳುತ್ತಿರುವುದು ಖಚಿತವಾದ ನಂತರ ಸೈನಿಕರು ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆಯಿತು. ಎನ್‍ಕೌಂಟರ್‍ನಲ್ಲಿ ಉಗ್ರನೊಬ್ಬ ಹತನಾದ. ಉಳಿದ ಭಯೋತ್ಪಾದಕರು ಪರಾರಿಯಾದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಹತನಾದ ಉಗ್ರಗಾಮಿಯಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಉಗ್ರರಿಗಾಗಿ ಶೋಧ ಮುಂದುವರಿದಿದೆ.ಇದೇ ವೇಳೆ, ಅನಂತನಾಗ್ ಜಿಲ್ಲೆಯ ಬನಿಹಾಲ್‍ನಲ್ಲಿ ಐಟಿಪಿಬಿ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಉಗ್ರರು ಹಠಾತ್ ದಾಳಿ ನಡೆಸಿ ಗುಂಡು ಹಾರಿಸಿದಾಗ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಪ್ರತಿದಾಳಿಗೆ ಹೆದರಿ ಉಗ್ರರು ಪಲಾಯನ ಮಾಡಿದ್ದಾರೆ.  ನಿನ್ನೆ ಉರಿ ವಲಯದಲ್ಲಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದ ಯೋಧರು ಆರು ಉಗ್ರರನ್ನು ಹತ್ಯೆ ಮಾಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin