ಗುರ್‍ಗಾಂವ್ ನ ಸ್ಪಾ ಸೆಂಟರ್‍ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ : 9 ಮಹಿಳೆಯರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Sex--02
ಗುರ್‍ಗಾಂವ್, ಜ.20-ಪ್ರತಿಷ್ಠಿತ ಮಾಲೊಂದರ ಸ್ಪಾ ಸೆಂಟರ್‍ನಲ್ಲಿ ನಡೆಯುತ್ತಿದ್ದ ಹೈ-ಟೆಕ್ ವೇಶ್ಯಾವಾಟಿಕೆಯನ್ನು ಭೇದಿಸಿರುವ ಹರಿಯಾಣದ ಗುರ್‍ಗಾಂವ್ ಪೊಲೀಸರು, ಥಾಯ್ಲೆಂಡ್ ಪ್ರಜೆಗಳೂ ಸೇರಿದಂತೆ ಒಂಭತ್ತು ಮಹಿಳೆಯರನ್ನು ಬಂಧಿಸಿದ್ದಾರೆ. ಎಂ.ಜಿ.ರಸ್ತೆಯ ಎಂಜಿಎಫ್ ಮೆಗಾಸಿಟಿ ಮಾಲ್‍ನ ನೇಚರ್ ಸ್ಪಾದಲ್ಲಿ ಮಸಾಜ್ ಸೋಗಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ಈ ಸಂಬಂಧ ಲಭಿಸಿದ ಖಚಿತ ವರ್ತಮಾನದ ಮೇಲೆ ಪೊಲೀಸರು ಸ್ಪಾ ಮೇಲೆ ಹಠಾತ್ ದಾಳಿ ನಡೆಸಿದರು.

ಪೊಲೀಸ್ ಪೇದೆಯೊಬ್ಬರನ್ನು ಗ್ರಾಹಕನಂತೆ ಸ್ಪಾಗೆ ಕಳುಹಿಸಿ ಈ ಜಾಲವನ್ನು ಭೇದಿಸಲು ತಂತ್ರ ರೂಪಿಸಲಾಯಿತು. ಒಂದು ಗಂಟೆ ಮಸಾಜ್ ಮತ್ತು ಲೈಂಗಿಕ ಖುಷಿಗಾಗಿ 2,500 ರೂ.ಗಳಿಗೆ ವ್ಯವಹಾರ ಕುದುರಿಸಲಾಯಿತು. ಈ ಜಾಲದೊಳಗೆ ಸ್ಪಾ ಸಿಬ್ಬಂದಿ ಬೀಳುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದರು.
ಗ್ರಾಹಕರಿಗೆ ವಾಟ್ಸಾಪ್ ಮತ್ತು ಫೇಸ್‍ಬುಕ್ ಮೂಲಕ ಸಂಪರ್ಕಿಸಿ ಈ ಹೈಟೆಕ್ ದಂಧೆ ನಡೆಸುತ್ತಿದ್ದ ಸಂಗತಿ ಬಯಲಾಯಿತು.   ಥಾಯ್ಲೆಂಡ್‍ನ ನಾಲ್ವರು ಯುವತಿಯರೂ ಸೇರಿದಂತೆ ಒಂಭತ್ತು ಮಹಿಳೆಯರನ್ನು ಬಂಧಿಸಲಾಗಿದೆ. ಈ ಸ್ಪಾದ ಮಾಲೀಕರು ಮತ್ತು ವ್ಯವಸ್ಥಾಪಕರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin