‘ಗುಳ್ಟು’ವಿನ ಗಾನ ಬಜಾನ

ಈ ಸುದ್ದಿಯನ್ನು ಶೇರ್ ಮಾಡಿ

Gultu-1

ಈಗಂತೂ ಹೊಸ ಹೊಸ ಪ್ರಯೋಗ ಹೊಸ ಥರದ ನಿರೂಪಣೆ ಇರುವ ಚಿತ್ರಗಳದ್ದೇ ಕಾರುಬಾರು ಎನ್ನಬಹುದಾಗಿದೆ. ಅಂಥಾ ಚಿತ್ರಗಳ ಸಾಲಿಗೆ ಸೇರಲಿರುವ ಮತ್ತೊಂದು ಸಿನಿಮಾ ಗುಳ್ಟು. ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಯುವ ನಿರ್ದೇಶಕ ಜನಾರ್ಧನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕ್ರೈಂ ಹಿನ್ನೆಲೆಯಲ್ಲಿ ಮೂಡಿ ಬರುತ್ತಿರುವ ಸಿನಿಮಾ ಆಗಿದ್ದು, ಈಗಾಗಲೇ ಶೂಟಿಂಗ್ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತಂಡ ಬ್ಯುಸಿಯಾಗಿದೆ.

ನವೀನ್‍ಶಂಕರ್ ಈ ಚಿತ್ರದ ನಾಯಕನಾಗಿ ನಟಿಸಿದ್ದು ಸೋನುಗೌಡ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರ ಜೊತೆ ಹಳೇ ಹುಲಿಗಳಾದ ರಂಗಾಯಣರಘು ಹಾಗೂ ಅವಿನಾಶ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಮೊನ್ನೆ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಡೆಯಿತು. ಈ ಚಿತ್ರಕ್ಕೆ ಪ್ರಶಾಂತ್ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ನಿರ್ದೇಶಕ ಜನಾರ್ಧನ್ ಜೊತೆ ಸ್ನೇಹವಿದ್ದು, ಸ್ಕಾಟ್ಲೆಂಡಿನಲ್ಲಿರುವ ಅಮಿತಾನಂದ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಮಾರು 45 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಸಿನಿಮಾ ಈಗ ಬಿಡುಗಡೆಯ ಹಂತ ತಲುಪಿದೆ.

ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದೆ. ನಾಯಕ ನವೀನ್‍ಶಂಕರ್ ಮಾತನಾಡಿ, ಹಳ್ಳಿಯಿಂದ ಸಿಟಿಗೆ ಬಂದು ಆಕಸ್ಮಿಕವಾಗಿ ಒಂದು ಕ್ರೈಂನಲ್ಲಿ ಸಿಕ್ಕಿ ಹಾಕಿ ಕೊಳ್ಳುವ ಹುಡುಗನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಾಯಕಿ ಸೋನುಗೌಡ ಮಾತನಾಡಿ, ಹೊಸಬರಾದರೂ ಒಳ್ಳೆಯ ಕಥೆಯನ್ನು ಮಾಡಿದ್ದಾರೆ. ನನ್ನ ಪಾತ್ರಕ್ಕೆ ಹಲವಾರು ಮುಖ ಗಳಿವೆ. ಅದರಲ್ಲಿ ಒಂದು ಬೋಲ್ಡ್ ಪಾತ್ರವಿದೆ. ತುಂಬಾ ಪ್ಲ್ಯಾನ್ ಮಾಡಿ ಕೊಂಡು ಸಿನಿಮಾ ಮಾಡ್ತಿ ದ್ದಾರೆ ಎಂದು ಚಿತ್ರತಂಡದ ಕೆಲಸ ಮೆಚ್ಚಿದರು.

Facebook Comments

Sri Raghav

Admin